20.2 C
Udupi
Friday, January 23, 2026
spot_img
spot_img
HomeBlog2026-27 ಜಿ.ಎಸ್‌.ಬಿ ಮಹಿಳಾ ವಿಭಾಗ ಕಾರ್ಕಳ

2026-27 ಜಿ.ಎಸ್‌.ಬಿ ಮಹಿಳಾ ವಿಭಾಗ ಕಾರ್ಕಳ

ಸಂಧ್ಯಾ ಕಾಮತ್ ಅಧ್ಯಕ್ಷತೆಯಲ್ಲಿ ಮಹಾಸಭೆ ಮತ್ತು ವಿಜೃಂಭಣೆಯ ವಾರ್ಷಿಕೋತ್ಸವ

2026-27 ಜಿ.ಎಸ್.ಬಿ ಮಹಿಳಾ ವಿಭಾಗ ಕಾರ್ಕಳ . 2026 ಜನವರಿ19 ರಂದು ಸಂಧ್ಯಾ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ವಾರ್ಷಿಕೋತ್ಸವ ಮಹಾಸಭೆ ವಿಜೃಂಭಣೆ ಯಿಂದ ನಡೆಯಿತು.
ಜಿ.ಎಸ್.ಬಿ ಮಹಿಳಾ ವಿಭಾಗದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುರಮಣಿ ಮಹಾಲಕ್ಷ್ಮಿ ಶೆಣೈ. ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು .ಶ್ರೀ ಸಾಮಾನ್ಯ ಸ್ತ್ರೀ ಅಸಮಾನ್ಯ ಭಾರತ ದೇಶದಲ್ಲಿ ಇತಿಹಾಸವನ್ನು ನೋಡಿದರೆ ಪ್ರಮುಖವಾಗಿ ಮಹಿಳೆಯರ ಸಾಧನೆ ಮಾಡಿದ ಪಟ್ಟಿ ಅನೇಕ ಇದೆ . ಒಬ್ಬ ಗ್ರಹಿಣಿ ಮನೆ ವಾರ್ತೆ ನೋಡಿ ಕೊಳ್ಳುದು ದೊಡ್ಡ ಜವಾಬ್ದಾರಿ ಅವರಿಗೆ ತಲೆಬಾಗಿ ನಮಸ್ಕರಿಸಬೇಕು.ದೇವರ ಅನುಗ್ರಹ ಹಾಗೂ ಗುರುಗಳ ಆಶೀರ್ವಾದ ಹಾಗೂ ಗೆಳತಿಯರ ಪ್ರೀತಿ ಇದ್ದಲ್ಲಿ ಅದೇ ದೊಡ್ಡ ಭಾಗ್ಯ.ಮಹಿಳೆಯರು ಸಕಾರಾತ್ಮವಾಗಿ ಸಂತೋಷದಲ್ಲಿದ್ದರೆ ಅವರನ್ನು ಅವಲಂಬಿಸಿದ ಎಲ್ಲರೂ ಸಂತೋಷದಲ್ಲಿ ಇರುತ್ತಾರೆ ಎಂದು ಜಿ ಎಸ್ ಬಿ ಮಹಿಳಾ ವಿಭಾಗದ ಎಲ್ಲಾ ಮಹಿಳೆಯರಿಗೆ ಅಭಿನಂದಿಸಿದರು.

4 ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

  1. ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ ನಡೆಸಿದ ಪರೀಕ್ಷೆಯಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಡಿಸೈನ್ ವಿಭಾಗದಲ್ಲಿ ಐದನೇ ರ್‍ಯಾಂಕ್ ಪಡೆದ ಶ್ವೇತಾ ಬಾಳಿಗ
  2. ದ್ವಿತೀಯ ಪಿಯುಸಿಯಲ್ಲಿ 9ನೇ ರ್‍ಯಾಂಕ್ , ಸಿಇಟಿ ಪರೀಕ್ಷೆಯಲ್ಲಿ 425ನೇ ರ್‍ಯಾಂಕ್ ಪಡೆದ ,ಕಾಮೆಡ ಕೆ ಹಾಗೂ ಜೆಈಈ ಉತ್ತಮ ಪರ್ಸೆಂಟೈಲ್ ಪಡೆದ ಸಂಜನಾ ಶೆಣೈ
  3. ಪಿ ಎಚ್ ಡಿ ಪದವಿ ಪಡೆದ ಹಾಗೂ ಬಡಗು ಮತ್ತು ತೆಂಕುತಿಟ್ಟುಯಕ್ಷಗಾನ ತಾಳ ಮದ್ದಲೆಯಲ್ಲಿ ಪ್ರವೀಣತೆ ಹೊಂದಿರುವ ಭುವನೇಂದ್ರ ಕಾಲೇಜ್ ಉಪನ್ಯಾಸಕಿ ಡಾಕ್ಟರ್ ಮಾಲತಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 622/625 ಅಂಕ ಪಡೆದ ಕು. ಮಾನಸಿ ನಾಯಕ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 621/625 ಪಡೆದ .ಕು. ಬಿ ಸಿಂಚನಾ ನಾಯಕ್
  4. ಹಾರ್ಮೋನಿಯಂ ಜೂನಿಯರ್ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಮೊದಲನೇ ರ್‍ಯಾಂಕ್ ಹಾಗೂ ತಬಲಾ ಜೂನಿಯರ್ ಪರೀಕ್ಷೆಯಲ್ಲಿ ಕಾರ್ಕಳದಲ್ಲಿ ಪ್ರಥಮ ರ್‍ಯಾಂಕ್ ಪಡೆದ 12 ವರ್ಷದ ಕು. ಐಶ್ವರ್ಯ ಪೈದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ 6ನೇ ರ್‍ಯಾಂಕ್ ಪಡೆದ ಕು . ಸಹನಾ ನಾಯಕ್ 7 ಸಾಧಕರಿಗೆ ಸನ್ಮಾನ ಮಾಡಲಾಯಿತು.

ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ವಿವಿಧ ಆಟೋಟ ಸ್ಪರ್ಧೆ , ರೆಟ್ರೋ ನೃತ್ಯ ಸ್ಪರ್ಧೆ ಹಾಗೂ ಛಧ್ಮವೇಷ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ರೇಷ್ಮಾ ಶೆಣೈರವರು ಪ್ರಾರ್ಥನೆ ಹಾಡಿದರು.. ಪ್ರಭಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯದರ್ಶಿ ಪ್ರಜ್ಞಾಪೈ ಅವರು ವರದಿ ವಾಚನ ಮಾಡಿದರು .ಕೋಶಾಧಿಕಾರಿ ವಾರಿಜಾ ವಿ ಕಾಮತ್ ರವರು ಆಯವ್ಯಯ ಓದಿ ಹೇಳಿದರು. ಶ್ವೇತಾ ಶೆಣೈ ವಂದಿಸಿದರು.
ಪದಾಧಿಕಾರಿಗಳಾದ:ಆರತಿ ಪೈ, ಮಮತಾ ಶೆಣೈ , ರಾಖಿ ಭಟ್, ಲಲಿತಾ ಭಟ್ ಹಾಗೂ ಪಲ್ಲವಿ ಪೈ ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page