21.7 C
Udupi
Tuesday, February 17, 2026
spot_img
spot_img
HomeBlog2025ರ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾದ ಗದಗದ ಬ್ರಹ್ಮ ಜಿನಾಲಯ ದೇವಾಲಯ

2025ರ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾದ ಗದಗದ ಬ್ರಹ್ಮ ಜಿನಾಲಯ ದೇವಾಲಯ

spot_imgspot_img

ಗದಗ: ಕಲೆ, ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಗದಗ ಜಿಲ್ಲೆಗೆ ಇದೀಗ ಮತ್ತೊಂದು ಹಿರಿಮೆ ಒಲಿದು ಬಂದಿದ್ದು ಅದೇನೆಂದರೆ 2025ರ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಗದಗ ಜಿಲ್ಲೆಯ ಲಕ್ಕುಂಡಿಯ ಬ್ರಹ್ಮ ಜಿನಾಲಯ ದೇವಸ್ಥಾನ ಐತಿಹಾಸಿಕ ದೇವಾಲಯ ಆಯ್ಕೆಯಾಗಿದೆ.

ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಈ ದೇವಾಲಯದ ಮಾದರಿಯ ಸ್ತಬ್ಧಚಿತ್ರ ಕಂಗೊಳಿಸಲಿದ್ದು ನಮ್ಮ ರಾಜ್ಯದ ಸಂಕೇತವಾಗಿ ಬ್ರಹ್ಮ ಜಿನಾಲಯ ಇಡೀ ದೇಶದಲ್ಲಿ ಸದ್ದು ಮಾಡಲಿದೆ.

ಗದಗವು 101 ಬಾವಿ 101 ದೇವಸ್ಥಾನ ಹೊಂದಿರುವ ಅಪರೂಪದ ಗ್ರಾಮವಾಗಿದ್ದು ಲಕ್ಕುಂಡಿ ಗ್ರಾಮ ವಿವಿಧ ಶಿಲ್ಪಕಲೆ, ವಾಸ್ತುಶಿಲ್ಪ ದೇವಾಲಯಗಳನ್ನು ಒಳಗೊಂಡಿದೆ. ಸಾಂಸ್ಕೃತಿಕ, ಐತಿಹಾಸಿಕ, ಶಿಲ್ಪಕಲಾ ನೈಪುಣ್ಯತೆಗೆ ತನ್ನದೆಯಾದ ಛಾಪು ಮೂಡಿಸಿದ್ದು ದೆಹಲಿಯಲ್ಲಿ ಕರ್ತವ್ಯಪಥದಲ್ಲಿ ನಡೆಯುವ ಪರೇಡ್‌ನಲ್ಲಿ ಪಾಲ್ಗೊಳ್ಳುವ ಬ್ರಹ್ಮ ಜಿನಾಲಯ ದೇವಾಲಯ ಲಕ್ಕುಂಡಿಯ ಶಿಲ್ಪಕಲಾ ವೈಭವವನ್ನು ಮತ್ತೆ ನೆನಪಿಸುತ್ತದೆ.

ಲಕ್ಕುಂಡಿ ದೇವಾಲಯ ಇತಿಹಾಸ:

ಮಹಾವೀರನ ದೇವಾಲಯಗಳಲ್ಲಿ ಜಿನಾಲಯವು ಒಂದಾಗಿದ್ದು ಈ ದೇವಸ್ಥಾನಕ್ಕೆ ಗ್ರೇಟ್ ಜೈನ್ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯವು 11ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದ್ದು ಪಶ್ಚಿಮ ಚಾಲುಕ್ಯರ ಶೈಲಿಯ ಕೆತ್ತನೆಯಿಂದ ಕೂಡಿರುವ ಬ್ರಹ್ಮ ಜಿನಾಲಯವನ್ನು ಕ್ರಿ.ಶ.1007 ರಲ್ಲಿ ದಂಡನಾಯಕ ನಾಗದೇವನ ಪತ್ನಿ ದಾನ ಚಿಂತಾಮಣಿ ಎಂದೇ ಪ್ರಖ್ಯಾತಳಾದ ಅತ್ತಿಮಬ್ಬೆ ಕಟ್ಟಿಸಿದಳು ಎಂದು ಇತಿಹಾಸದಲ್ಲಿದೆ.

ಈ ದೇವಾಲಯ ಶಿವ ದೇವಾಲಯದ ರೀತಿ ಪೂರ್ವಕ್ಕೆ ಮುಖ ಮಾಡಿ ಸ್ಥಾಪನೆಯಾಗಿದ್ದು ಅಂತರಾಳ, ಗೂಢಮಂಟಪ, ಅಗ್ರಮಂಟಪ, ತಲವಿನ್ಯಾಸ, ಕಪ್ಪು ಶಿಲೆ ಹೊಂದಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ, 22ನೇಯ ನೇಮಿನಾಥ ತೀರ್ಥಂಕರ ಮೂರ್ತಿಯಿದೆ. ಗರ್ಭಗುಡಿಯ ಹೊರಭಾಗದಲ್ಲಿ,‌ ಚತುರ್ಮುಖ ಬ್ರಹ್ಮ ಮತ್ತು ಸರಸ್ವತಿ ಮೂರ್ತಿಗಳಿವೆ. 32 ವಿವಿಧ ಆಕೃತಿಯ ಸುಂದರ ಕೆತ್ತನೆಯ ಕಂಬಗಳಿರುವ ವಿಶೇಷ ದೇವಾಲಯವಾಗಿದೆ.

ನುರಿತ ಕಲಾವಿದರು ಪೈಬರ್ನಿಂದ ಬ್ರಹ್ಮ ಜಿನಾಲಯ ದೇವಸ್ಥಾನದ ಸ್ತಬ್ಧಚಿತ್ರ ನಿರ್ಮಾಣ‌‌‌ ಕಾರ್ಯ ಮಾಡುತ್ತಿದ್ದು ಲಕ್ಕುಂಡಿ ಗ್ರಾಮದ ಐತಿಹಾಸಿಕ ದೇವಸ್ಥಾನ ಆಯ್ಕೆಯಾಗಿರುವುದು ಬಹಳ ಸಂತಸ ತಂದಿದೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page