
ಕಾರ್ಕಳ : ಬೆಂಗಳೂರು ನಗರ ಜಿಲ್ಲಾ ಟೇಕ್ವಾಂಡೋ ಸಂಘ ಆಯೋಜಿಸಿದ ಅಕ್ಟೋಬರ್ 12ರಂದು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಾರ್ಕಳ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರದ ಏಳನೇ ತರಗತಿ ವಿದ್ಯಾರ್ಥಿ ಸಮರ್ಥ್ ಎಸ್. ನಾಯಕ್ ಕ್ಯೂಗಿ೯ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಪೂಮ್ಸೆ ಸ್ಪರ್ಧೆಯಲ್ಲಿ ಕಂಚಿನ ಪದಕ, 6ನೇ ತರಗತಿ ವಿದ್ಯಾರ್ಥಿ ಅಧಿಕ್ಷಿತ್ ಶೆಟ್ಟಿ ಕ್ಯೂಗಿ೯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪೂಮ್ಸೆ ಕಂಚಿನ ಪದಕ,ಮೊಹಮ್ಮದ್ ಅನಾಸ್ 6ನೇ ತರಗತಿ ಕ್ಯೂಗಿ೯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪೂಮ್ಸೆ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ ಸದಸ್ಯರು , ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದ ಶುಭ ಹಾರೈಸಿರುತ್ತಾರೆ.











