21.9 C
Udupi
Sunday, February 15, 2026
spot_img
spot_img
HomeBlog2025ರ ಅಮರನಾಥ ಯಾತ್ರೆಯು ಜುಲೈ 3 ರಿಂದ ಆರಂಭ

2025ರ ಅಮರನಾಥ ಯಾತ್ರೆಯು ಜುಲೈ 3 ರಿಂದ ಆರಂಭ

spot_imgspot_img

2025 ರ ಅಮರನಾಥ ಯಾತ್ರೆಯು ಜುಲೈ 3 ರಿಂದ ಆರಂಭವಾಗಲಿದ್ದು ಆಗಸ್ಟ್ 9 ರಂದು ಕೊನೆಗೊಳ್ಳಲಿದೆ.

ಯಾತ್ರಿಕರು ಶ್ರೀ ಅಮರನಾಥ ದೇಗುಲ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದ್ದು ಶ್ರೀ ಅಮರನಾಥ ದೇವಾಲಯ ಮಂಡಳಿಯು ಭಾರತದಾದ್ಯಂತ 540 ಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳನ್ನು ಹೊಂದಿದೆ. ಭಕ್ತರು ಅಲ್ಲಿಯೂ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ನೋಂದಣಿ ಮಾಡಿಕೊಳ್ಳುವ ವಿಧಾನ

  • ಶ್ರೀ ಅಮರನಾಥ ದೇಗುಲ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಆನ್‌ಲೈನ್ ಸೇವೆಗಳ ಮೇಲೆ ಕ್ಲಿಕ್ ಮಾಡಿದಾಗ ಟ್ರಿಪ್ ಮೆನುವಿನಲ್ಲಿ ಟ್ರಿಪ್ ನೋಂದಣಿ ಮೇಲೆ ಕ್ಲಿಕ್ ಮಾಡಿ ಸೂಚನೆಗಳನ್ನು ಎಚ್ಚರಿಕೆಯಿಂದ ಓದಬೇಕು. ನಿಯಮಗಳನ್ನು ಒಪ್ಪಿಕೊಂಡು ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಪ್ರಯಾಣದ ದಿನಾಂಕದಂತಹ ವೈಯಕ್ತಿಕ ವಿವರಗಳನ್ನು ನಮೂದಿಸಬೇಕು.
  • ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಆರೋಗ್ಯ ಪ್ರಮಾಣ ಪತ್ರದ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು.
  • ಬಳಿಕ ನೋಂದಾಯಿತ ಸಂಖ್ಯೆಗೆ ಬಂದ OTP ಯನ್ನು ಹಂಚಿಕೊಳ್ಳಬೇಕು. ಬಳಿಕ ರೂ. 220 ನೋಂದಣಿ ಶುಲ್ಕವನ್ನು ಪಾವತಿಸಿದ ನಂತರ ಪೋರ್ಟಲ್‌ನಿಂದ ಪ್ರಯಾಣ ನೋಂದಣಿ ಪರವಾನಗಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page