ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಕಾರ್ಕಳ : 2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಎಸ್.ವಿ.ಟಿ. ವನಿತಾ ಪದವಿಪೂರ್ವ ಕಾಲೇಜು ಕಾರ್ಕಳ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ 100 % ಹಾಗೂ ಕಲಾ ವಿಭಾಗ ಶೇಕಡ 91.30% , ಒಟ್ಟು 96.55 % ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದ ಮುನೀರಾ ಬೇಗಂ 586 ಅಂಕಗಳನ್ನು ಪಡೆದು 97.66% ಹಾಗೂ ಕಲಾ ವಿಭಾಗದ ಆಯಿಷಾ ಶಾಬನಮ್ 536 ಅಂಕಗಳನ್ನು ಪಡೆದು 89.33% ಪಡೆದಿರುತ್ತಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 58 ವಿದ್ಯಾರ್ಥಿಗಳಲ್ಲಿ
11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 14 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು , ಹಿರಿಯ ಸಹಶಿಕ್ಷಕರು, ಉಪನ್ಯಾಸಕರು ಹಾಗೂ ಅಧ್ಯಾಪಕವೃಂದ ಅಭಿನಂದಿಸಿರುತ್ತಾರೆ.