31.1 C
Udupi
Monday, April 13, 2026
spot_img
spot_img
HomeBlog2024-2025ರ ಬಜೆಟ್ ನಲ್ಲಿ ಹಲವು ವಸ್ತುಗಳ ಬೆಲೆ ಇಳಿಕೆಯಾದರೆ, ಕೆಲ ವಸ್ತುಗಳು ಬೆಲೆ ದುಬಾರಿ: ಮೊಬೈಲ್,...

2024-2025ರ ಬಜೆಟ್ ನಲ್ಲಿ ಹಲವು ವಸ್ತುಗಳ ಬೆಲೆ ಇಳಿಕೆಯಾದರೆ, ಕೆಲ ವಸ್ತುಗಳು ಬೆಲೆ ದುಬಾರಿ: ಮೊಬೈಲ್, ಚಿನ್ನ ಸೇರಿ ಕೆಲ ವಸ್ತುಗಳು ಅಗ್ಗ

ನವದೆಹಲಿ: ನಿರ್ಮಲಾ ಸೀತಾರಾಮನ್ ತಮ್ಮ 7ನೇ ಬಜೆಟ್ ನಲ್ಲಿ ಕೆಲ ನೀತಿಗಳ ಬದಲಾವಣೆ, ಆಮದು ಸುಂಕ, ತೆರಿಗೆ ನೀತಿಯಲ್ಲಿನ ಬದಲಾವಣೆಗಳಿಂದ ಹಲವು ವಸ್ತುಗಳು ಬೆಲೆ ಇಳಿಕೆಯಾದರೆ, ಕೆಲ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೊಬೈಲ್, ಚಿನ್ನ, ಬೆಳ್ಳಿ ಸೇರಿದಂತೆ ಪ್ರಮುಖ ವಸ್ತಗಳ ಬೆಲೆ ಇಳಿಕೆಯಾಗಿದ್ದು ಪ್ಲಾಸ್ಟಿಕ್, ಆಮದು ಬಟ್ಟೆ ಸೇರಿದಂತೆ ಕೆಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಪ್ಲಾಟಿನಂ ಕಸ್ಟಮ್ ತೆರಿಗೆಯನ್ನು ಶೇಕಡಾ 6 ರಷ್ಟು ಇಳಿಕೆ ಹಾಗೂ ಮೊಬೈಲ್ ಫೋನ್ ಹಾಗೂ ಚಾರ್ಜರ್ ಮೇಲಿನ ಕಸ್ಟಮ್ ತೆರಿಗೆಯನ್ನು ಶೇಕಡಾ 15ರಷ್ಟು ಇಳಿಕೆ ಮಾಡಲಾಗಿದೆ. ಲಿಥಿಯಂ ಇಯಾನ್ ಬ್ಯಾಟರಿ ಮೇಲಿನ ತೆರಿಗೆ ಕಡಿತಗೊಳಿಸಲಾಗಿದ್ದು ಇದರಿಂದ ಮೊಬೈಲ್ ಮಾತ್ರವಲ್ಲ, ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಇಳಿಕೆಯಾಗಲಿದೆ. ಇನ್ನು ಕ್ಯಾಮೆರಾ ಲೆನ್ಸ್ ಮೇಲಿನ ತೆರಿಗೆ, ಸಮುದ್ರ ಆಹಾರಗಳಾದ ಮೀನು ಸೇರಿದಂತೆ ಇತರೆ ಬೆಲಯಲ್ಲಿ ಇಳಿಕೆಯಾಗಲಿದೆ.

ಪ್ಲಾಸ್ಟಿಕ್ – ಫ್ಲೆಕ್‌ ತೆರಿಗೆ, ಆಮದು ಬಟ್ಟೆಗಳ ಬೆಲೆ ಏರಿಕೆಯಾದರೆ; ಕ್ಯಾನ್ಸರ್ ಔಷಧಿ, ಮೊಬೈಲ್, ಬೆಳ್ಳಿ-ಬಂಗಾರ, ಪ್ಲಾಟಿನಂ, ಮೀನು ಸೇರಿದಂತೆ ಸಮುದ್ರ ಆಹಾರ, ಸೋಲಾರ್ ಶಕ್ತಿ ಬಿಡಿ ಭಾಗ, ಚಪ್ಪಲಿ ಸೇರಿದಂತೆ, ಕ್ಯಾಮೆರಾ ಲೆನ್ಸ್, ಎಲೆಕ್ಟ್ರಿಕ್ ವಾಹನ, ಕಂಪ್ರೆಸ್ಡ್ ಗ್ಯಾಸ್ ನ ಬೆಲೆ ಇಳಿಕೆಯಾಗಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page