
2023- 24 ನೇ ಸಾಲಿನ NMMS ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲೆ, ಕಲ್ಯಾ ಕಾರ್ಕಳ ತಾಲೂಕು ಇಲ್ಲಿಂದ ಹಾಜರಾದ 13 ವಿದ್ಯಾರ್ಥಿಗಳಲ್ಲಿ ಗರಿಷ್ಠ 07 ವಿದ್ಯಾರ್ಥಿಗಳು ಉತ್ತೀರ್ಣರಾಗಿ
ರೂ .12, 000 ವಾರ್ಷಿಕ ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ (ಮುಂದಿನ ನಾಲ್ಕುವರ್ಷಗಳಿಗೆ.)
NMMS ಪರೀಕ್ಷೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಉತ್ತೀರ್ಣತೆ ಹೊಂದಿದ ಕಾರ್ಕಳ ತಾಲ್ಲೂಕಿನ ಶಾಲೆಗಳಲ್ಲಿ ದ್ವಿತೀಯ ಸ್ಥಾನವನ್ನು ಕಲ್ಯಾ ಪ್ರೌಢ ಶಾಲೆ ಪಡೆದಿದೆ.
ಈ ಅಪೂರ್ವ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ನಿರಂತರ ತರಬೇತಿ ನೀಡಿದ ಶಿಕ್ಷಕ ವೃಂದವನ್ನು ಹಾಗೂ ಮುಖ್ಯ ಶಿಕ್ಷಕರನ್ನು ಎಸ್.ಡಿ.ಎಂ.ಸಿ.ಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದಿಸಿರುತ್ತಾರೆ.