
2023- 24 ನೇ ಸಾಲಿನ NMMS ಪರೀಕ್ಷೆಯಲ್ಲಿ ಸರಕಾರಿ ಪ್ರೌಢ ಶಾಲೆ, ಕಲ್ಯಾ ಕಾರ್ಕಳ ತಾಲೂಕು ಇಲ್ಲಿಂದ ಹಾಜರಾದ 13 ವಿದ್ಯಾರ್ಥಿಗಳಲ್ಲಿ ಗರಿಷ್ಠ 7 ವಿದ್ಯಾರ್ಥಿಗಳು ಉತ್ತೀರ್ಣರಾಗಿರೂ .12, 000 ವಾರ್ಷಿಕ ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ (ಮುಂದಿನ ನಾಲ್ಕುವರ್ಷಗಳಿಗೆ.)NMMS ಪರೀಕ್ಷೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಉತ್ತೀರ್ಣತೆ ಹೊಂದಿದ ಕಾರ್ಕಳ ತಾಲ್ಲೂಕಿನ ಶಾಲೆಗಳಲ್ಲಿ ದ್ವಿತೀಯ ಸ್ಥಾನವನ್ನು ಕಲ್ಯಾ ಪ್ರೌಢ ಶಾಲೆ ಪಡೆದಿದೆ.
ಈ ಅಪೂರ್ವ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ನಿರಂತರ ತರಬೇತಿ ನೀಡಿದ ಶಿಕ್ಷಕ ವೃಂದವನ್ನು ಹಾಗೂ ಮುಖ್ಯ ಶಿಕ್ಷಕರನ್ನು ಎಸ್.ಡಿ.ಎಂ.ಸಿ.ಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದಿಸಿರುತ್ತಾರೆ.