25.9 C
Udupi
Saturday, July 12, 2025
spot_img
spot_img
HomeBlog2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ: 15 ಪುಟಗಳ ವರದಿಯಲ್ಲಿ ಹಲವು ಅಂಶಗಳು...

2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ: 15 ಪುಟಗಳ ವರದಿಯಲ್ಲಿ ಹಲವು ಅಂಶಗಳು ಬಹಿರಂಗ

ಅಹಮದಾಬಾದ್‌: ಕೆಲ ದಿನಗಳ ಹಿಂದೆ ನಡೆದ ಅಹಮದಾಬಾದ್‌ ಏರ್ ಇಂಡಿಯಾ ವಿಮಾನ ದುರಂತದಲ್ಲಿ 260 ಜನ ಸಾವನ್ನಪ್ಪಿದ್ದು ಈ ಘಟನೆಯ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ 15 ಪುಟಗಳ ಪ್ರಾಥಮಿಕ ವರದಿ ಬಿಡುಗಡೆ ಮಾಡಿದೆ.

ಈ ವರದಿಯಲ್ಲಿ ಪೈಲಟ್‌ಗಳ ಕಾಕ್‌ಪಿಟ್‌ ಧ್ವನಿ ರೆಕಾರ್ಡಿಂಗ್‌ ಡೇಟಾವನ್ನ ಉಲ್ಲೇಖಿಸಲಾಗಿದ್ದು ಇದರಲ್ಲಿ ವಿಮಾನವು ವಾಯುಪ್ರದೇಶಕ್ಕೆ ತಲುಪಿದ ಕೆಲವೇ ಸೆಕೆಂಡುಗಳಲ್ಲಿ ಡ್ಯುಯಲ್-ಎಂಜಿನ್ ಸ್ಥಗಿತಗೊಂಡಿರುವುದು ಅಪಘಾತಕ್ಕೆ ಕಾರಣ ಎಂದು ಸೂಚಿಸಲಾಗಿದೆ.

ಟೇಕ್ ಆಫ್ ಆದ 3 ಸೆಕೆಂಡ್‌ಗಳ ನಂತರ, ಎರಡೂ ಇಂಜಿನ್‌ಗಳ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳು ರನ್‌ ನಿಂದ ಕಟ್‌ಆಫ್‌ಗೆ ಬದಲಾದವು. ಇದರಿಂದಾಗಿ ಥ್ರಸ್ಟ್ ಇದ್ದಕ್ಕಿದ್ದಂತೆ ಕಡಿಮೆಯಾಯಿತು. ಅಲ್ಲದೇ ಒಂದು ಪೈಲಟ್ ʻನೀವು ಏಕೆ ಕಟ್ ಆಫ್ ಮಾಡಿದ್ರಿ?ʼ ಎಂದು ಕೇಳುವುದು ಕೇಳಿಸುತ್ತದೆ. ಅದಕ್ಕೆ ಇನ್ನೊಬ್ಬ ಪೈಲಟ್ ʻನಾನು ಮಾಡಿಲ್ಲʼ ಎಂದು ಉತ್ತರಿಸುತ್ತಾರೆ. ಇದರಿಂದ ತಾಂತ್ರಿಕ ದೋಷ ಅಥವಾ ಆಕಸ್ಮಿಕವಾಗಿ ಸ್ವಿಚ್ ಆಫ್ ಆಗಿರಬಹುದು ಎಂದು ಶಂಕಿಸಲಾಗಿದೆ.

ಇನ್ನೂ ಫ್ಲೈಟ್ ಡೇಟಾ ರೆಕಾರ್ಡರ್‌ ಪ್ರಕಾರ, ಇಂಜಿನ್-1 ಅನ್ನು ಸ್ವಯಂಚಾಲಿತವಾಗಿ ಮರುಪ್ರಾರಂಭಿಸಲು ಪ್ರಯತ್ನಿಸಿದಾಗ ಅದು ಯಶಸ್ವಿಯಾಯಿತು. ಆದ್ರೆ ಇಂಜಿನ್ 2 ಅನ್ನು ಮರುಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ರಾಮ್ ಏರ್ ಟರ್ಬೈನ್ (RAT) ಅನ್ನು ತುರ್ತು ವಿದ್ಯುತ್ ಮೂಲವಾಗಿ ಬಳಸಲಾಗಿತ್ತು. ಇದು ಟೇಕ್ ಆಫ್ ಆದ ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇದರಿಂದ ಅಗತ್ಯ ಸಿಸ್ಟಮ್‌ಗಳಿಗೆ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿತು ಎಂದು ವರದಿ ತಿಳಿಸಿದೆ. (RAT ಅಂದರೆ ವಿಮಾನದಲ್ಲಿನ ಎಲೆಕ್ಟ್ರಿಕಲ್ ವ್ಯವಸ್ಥೆ ಕೈಕೊಟ್ಟಾಗ ಉಪಯೋಗಿಸುವ ಒಂದು ಸಾಧನ).

ವಿಮಾನವು ಏರ್‌ಪೋರ್ಟ್‌ನ ಹೊರಗಿನ ಕಟ್ಟಡಗಳಿಗೆ ಡಿಕ್ಕಿ ಹೊಡೆಯುವ ಕೆಲವೇ ಸೆಕೆಂಡುಗಳ ಮೊದಲು, 08:09:05 ಯುಟಿಸಿ ಗೆ ತುರ್ತು ಕರೆ ಮಾಡಿದ್ದು ಈ ವೇಳೆ ಮೇ ಡೇ ಎಂಬ ಸಂದೇಶವನ್ನು ಪೈಲಟ್‌ ಕೊಟ್ಟಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page