
ನವದೆಹಲಿ: ಸುಪ್ರೀಂ ಕೋರ್ಟ್ ಮಹತ್ವದ ಬದಲಾವಣೆಯನ್ನು ತಂದಿದ್ದು ಅದೇನೆಂದರೆ ಗೆಜೆಟ್ ನಲ್ಲಿ ಪ್ರಕಟವಾದ ಅಧಿಸೂಚನೆಯ ಪ್ರಕಾರ 2025ರ ಜುಲೈ 14 ರಿಂದ 2ನೇ ಮತ್ತು 4ನೇ ಶನಿವಾರ ಸುಪ್ರೀಂಕೋರ್ಟ್ ನ ನೋಂದಾವಣೆ ಮತ್ತು ಕಚೇರಿಗಳ ಕೆಲಸದ ದಿನಗಳ ಪಟ್ಟಿಗೆ ಮರಳಿ ಸೇರಿಸಿದೆ.
ಸುಪ್ರೀಂ ಕೋರ್ಟ್ ನಿಯಮಗಳ ಆದೇಶ ||, ನಿಯಮಗಳು 1ರಿಂದ 3ರ ಅಡಿಯಲ್ಲಿದ್ದು ಕೆಲಸದ ದಿನಗಳು ಮತ್ತು ಕಚೇರಿ ಸಮಯಗಳಿಗೆ ಪರಿಷ್ಕೃತ ಚೌಕಟ್ಟನ್ನು ಪರಿಚಯಿಸಿದೆ. ಹೊಸ ಅಧಿಸೂಚನೆಯ ಪ್ರಕಾರ ಸುಪ್ರೀಂ ಕೋರ್ಟ್ ನ ಕಚೇರಿಗಳು ಈಗ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ವರೆಗೆ ಕಾರ್ಯನಿರ್ವಹಿಸುತ್ತದೆ. ಗೊತ್ತುಪಡಿಸಿದ ರಜಾದಿನಗಳು ಮತ್ತು ಭಾಗಶಃ ಕೆಲಸದ ದಿನಗಳನ್ನು ಹೊರತುಪಡಿಸಿ ನಿಯಮಿತ ವಾರದ ದಿನಗಳಲ್ಲಿ ಸಂಜೆ 4:30 ನಂತರ ತುರ್ತು ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು.
ಹೀಗಾಗಿ ಈವರೆಗೆ ಸಾಂಪ್ರದಾಯಿಕವಾಗಿ ರಜೆ ಇದ್ದ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿದಂತೆ ಎಲ್ಲಾ ಶನಿವಾರವು ನ್ಯಾಯಾಲಯದ ಕಚೇರಿಗಳು ಕೆಲಸ ನಿರ್ವಹಿಸಲಿದೆ. ಶನಿವಾರದ ಕಚೇರಿ ಸಮಯ ಬೆಳಗ್ಗೆ 10 ರಿಂದ ಮಧ್ಯಾಹ್ನ 1:00 ಆಗಿರುತ್ತದೆ.