28.1 C
Udupi
Saturday, April 11, 2026
spot_img
spot_img
HomeBlog1ನೇ ತರಗತಿ ಪ್ರವೇಶಕ್ಕೆ 60 ದಿನ ವಯೋಮಿತಿ ಸಡಿಲಿಕೆ: ಸರ್ಕಾರದ ಆದೇಶ

1ನೇ ತರಗತಿ ಪ್ರವೇಶಕ್ಕೆ 60 ದಿನ ವಯೋಮಿತಿ ಸಡಿಲಿಕೆ: ಸರ್ಕಾರದ ಆದೇಶ

ಬೆಂಗಳೂರು: ಮೊದಲ ತರಗತಿ ಪ್ರವೇಶಕ್ಕೆ 6 ವರ್ಷ ವಯಸ್ಸು ಕಡ್ಡಾಯ ಮಾಡುವ ನಿರ್ಧಾರ ಪೋಷಕರಿಂದ ಭಾರಿ ವಿರೋಧಕ್ಕೆ ಗುರಿಯಾಗಿತ್ತು. ನಂತರ ಶಿಕ್ಷಣ ಇಲಾಖೆ ವಿನಾಯಿತಿ ನೀಡಿದರೂ ಅಸಮಾಧಾನ ಮುಂದುವರಿದಿತ್ತು. ಈಗ ಸರ್ಕಾರ 1ನೇ ತರಗತಿ ದಾಖಲಾತಿಗೆ 60 ದಿನಗಳ ವಯೋಮಿತಿ ಸಡಿಲಿಕೆ ಘೋಷಿಸಿದೆ.

2026-27ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ, ಜೂನ್‌ 1 ಅನ್ನು ಆಧಾರವಾಗಿ ತೆಗೆದುಕೊಂಡು 60 ದಿನಗಳವರೆಗೆ ವಯಸ್ಸಿನಲ್ಲಿ ಸಡಿಲಿಕೆ ನೀಡಿ ಮಕ್ಕಳ ದಾಖಲಾತಿ ಪರಿಗಣಿಸಲು ಸರ್ಕಾರ ಸೂಚಿಸಿದೆ. ಅಂದರೆ, ಜೂನ್‌ 1 ನಂತರದಿಂದ ಜುಲೈ 30ರೊಳಗೆ ಜನಿಸಿದ ಮಕ್ಕಳಿಗೂ 1ನೇ ತರಗತಿಗೆ ಪ್ರವೇಶ ಅವಕಾಶ ದೊರೆಯಲಿದೆ.

ಪೋಷಕರ ಮನವಿಗಳಿಗೆ ಸ್ಪಂದಿಸಿ, ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ಕಲಂ 20ರಡಿ ಈ ವಿಶೇಷ ಸಡಿಲಿಕೆ ನೀಡಲಾಗಿದೆ. ಇದುವರೆಗೆ 6 ವರ್ಷ ಪೂರ್ಣಗೊಳ್ಳುವುದು ಕಡ್ಡಾಯವಾಗಿದ್ದರೆ, ಇದೀಗ 5 ವರ್ಷ 10 ತಿಂಗಳು ಪೂರೈಸಿದ ಮಕ್ಕಳಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page