
ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಕಾರ್ಕಳ ಕಸಬಾ ಗ್ರಾಮದ ಪತ್ತೊಂಜಿಕಟ್ಟೆಯ ಪೆರ್ವಾಜೆಯ ನಿವಾಸಿ ಸುರೇಶ್ ಶೆಟ್ಟಿ ಎಂಬವರ ಮಗ ಸಮರ್ಥ್ ಶೆಟ್ಟಿ ಇವರ ವಿರುದ್ಧ ಕಾರ್ಕಳ ತಾಲೂಕು ಕಾರ್ಕಳ ಕಸಬಾ ಗ್ರಾಮದ ಪತ್ತೊಂಜಿಕಟ್ಟೆ ಪೆರ್ವಾಜೆಯ ನಿವಾಸಿ ರಾಘವೇಂದ್ರ ಶೆಟ್ಟಿ ಇವರು ರೂಪಾಯಿ 17,00,000 ಕ್ಕೆ ದಾಖಲಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ವಾದ ವಿವಾದಗಳನ್ನು ಆಲಿಸಿದ ನಂತರ ಮಾನ್ಯ ನ್ಯಾಯಾಧೀಶರಾದ ಕೋಮಲ ಆರ್.ಸಿ ಇವರು ಆರೋಪಿ ಸಮರ್ಥ್ ಶೆಟ್ಟಿ ಇವರನ್ನು ದೋಷಿ ಎಂದು ಪರಿಗಣಿಸಿ ದಂಡ ಸೇರಿಸಿ ರೂಪಾಯಿ 18,50,000 ವನ್ನು ಪಿರ್ಯಾದಿದಾರರಾದ ರಾಘವೇಂದ್ರ ಶೆಟ್ಟಿ ಇವರಿಗೆ ಮರುಪಾವತಿ ಮಾಡುವಂತೆ ಆದೇಶ ಮಾಡಿರುತ್ತಾರೆ.
ತಪ್ಪಿದಲ್ಲಿ ಸೆರೆವಾಸ ಅನುಭವಿಸುವಂತೆ ತೀರ್ಪು ನೀಡಿದ್ದು ರಾಘವೇಂದ್ರ ಶೆಟ್ಟಿ ಅವರ ಪರವಾಗಿ ಕಾರ್ಕಳದ ನ್ಯಾಯವಾದಿ ರವಿಶಂಕರ್ ಬಿ ಎಂ ಇವರು ವಾದಿಸಿದ್ದರು.






