26.3 C
Udupi
Thursday, July 3, 2025
spot_img
spot_img
HomeBlog10ನೇ ತರಗತಿಯಲ್ಲಿ,ಆಂಗ್ಲ ಭಾಷೆಯಲ್ಲಿ ಸ್ಕೋರಿಂಗ್ ಹೇಗೆ..?

10ನೇ ತರಗತಿಯಲ್ಲಿ,ಆಂಗ್ಲ ಭಾಷೆಯಲ್ಲಿ ಸ್ಕೋರಿಂಗ್ ಹೇಗೆ..?

ಪ್ರೇಮ ಆರ್ ಶೆಟ್ಟಿ, ಹವ್ಯಾಸಿ ಬರಹಗಾರರು
ಸ.ಪ.ಪೂ. ಕಾಲೇಜು ಮೂಲ್ಕಿ

  ನಮಗೆಲ್ಲಾ ತಿಳಿದ ಹಾಗೆ ಕನ್ನಡ ಮಾಧ್ಯಮದ ಮಕ್ಕಳಾದರೂ ಆಂಗ್ಲ ಭಾಷೆಯಲ್ಲಿ ಏನೂ ಯಾರೂ ಹಿಂದೆ ಬಿದ್ದಿಲ್ಲ. ಅಲ್ಲಿ ಇಲ್ಲಿ ಒಂದಷ್ಟು ಜನ ಇಂಗ್ಲಿಷ್ ಕಷ್ಟ ಎಂದರೂ ಅವರೆಲ್ಲರೂ ಮೊಬೈಲ್ ಬಳಕೆಯಲ್ಲಿ ಮುಂದಿದ್ದಾರೆ. ಬೆಳಗ್ಗೆ ಎದ್ದಾಗ ಬಳಸುವ ಪೇಸ್ಟ್, ಬ್ರಷ್ ಎಂಬ ಆಂಗ್ಲ ಪದಗಳಿಂದ ಪ್ರಾರಂಭ ಆಗುವ ನಮ್ಮ ದಿನ ಗುಡ್ ನೈಟ್‌ನೊಂದಿಗೆ ಕೊನೆಗೊಳ್ಳುತ್ತದೆ ಇದು ಸರ್ವೇ ಸಾಮಾನ್ಯ ಸಂಗತಿ. ಇಲ್ಲಿ ಹಲವಾರು ಪದಗಳು ನಮಗೆ ಕನ್ನಡದಲ್ಲಿ ತಿಳಿದಿಲ್ಲ. ಹಾಗಿರುವಾಗ ಆಂಗ್ಲ ಭಾಷಾ ಪದಗಳಿಗೆ ನಮ್ಮಲ್ಲಿ ಕೊರತೆ ಇಲ್ಲ. 

*ಕಷ್ಟ ಎಲ್ಲಿ?
ಹಾಗಾದರೆ ದ್ವಿತೀಯ ಭಾಷೆಯಾಗಿ ಅಂಗ್ಲ ಭಾಷೆಯನ್ನು ಕಲಿಯುವಾಗ ಸಾವಿರಾರು ಆಂಗ್ಲ ಭಾಷಾ ಪದಗಳನ್ನೇ ದಿನನಿತ್ಯ ಬಳಸುವ ನಮಗೆ ಕಷ್ಟ ಆಗುವುದು ಎಲ್ಲಿ? ನಮಗೆ ನಾವೇ ಪ್ರಶ್ನಿಸಿಕೊಂಡಾಗ ಅರಿವಾಗುವುದು ನಾವು ಪದಗಳನ್ನು ಬಳಸುತ್ತೇವೆಯೇ ಹೊರತು ವಾಕ್ಯಗಳನ್ನಲ್ಲ! ವಾಕ್ಯ ಹೇಳುವಲ್ಲಿ ಮತ್ತು ಬರೆಯುವಲ್ಲಿ ನಮಗೆ ಕಷ್ಟ್ವೆನಿಸುತ್ತದೆ. ಸ್ವಂತ ವಾಕ್ಯರಚನೆ ನಮ್ಮ ಕಷ್ಟದ ಭಾಗ.

*ಪರಿಹಾರ ಹೇಗೆ?
ಇದರ ಬಗ್ಗೆ ನಾವು ಯೋಚನೆ ಮಾದ ಬೇಕಾದುದು. ಹೇಗೆ ನಾವು ನಮ್ಮ ವಾಕ್ಯಗಳನ್ನು ತಪ್ಪಿಲ್ಲದೆ, ವ್ಯಾಕರಣಬದ್ಧವಾಗಿ ಸರಿಪಡಿಸಿಕೊಂಡು ಬರೆಯಬೇಕು? ಮೊದಲನೆಯದಾಗಿ ಪ್ರಾಕ್ಟಿಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್. ಲಿಫ್ಟ್ ಗೆ ಕಾಯದೆ ನಡೆದು ಗುರಿ ತಲುಪುವವನು ಖಂಡಿತಾ ಯಾರಿಗೂ ಹೆದರಬೇಕಿಲ್ಲ. ಕಠಿಣ ಪರಿಶ್ರಮ ಯಶಸ್ಸಿಗೆ ದಾರಿ. ಭಾಷಾ ಬಳಕೆ ಭಾಷಾ ಕಲಿಕೆಗೆ ಪೂರಕ. ಇಂದಿನಿಂದಲೇ ಡೈರಿ ಬರೆಯಲು ಪ್ರಾರಂಭಿಸಿ. ನಿಮ್ಮ ಅನಿಸಿಕೆ, ಅಭಿಪ್ರಾಯಗಳು ನೀವು ಕಲಿತ ಆಂಗ್ಲ ಭಾಷೆಯಲ್ಲೇ ಬಳಕೆ ಆಗಲಿ. ಆಗ ಸ್ವಂತ ಭಾಷಾ ಬಳಕೆ ಹೆಚ್ಚಿ ಅದು ಬದುಕಿಗೂ ಪರೀಕ್ಷೆಗೂ ಪೂರಕ. ಮತ್ತೆ ಮತ್ತೆ ಆಂಗ್ಲ ಭಾಷೆಯಲ್ಲೇ ಕಲಿಯಿರಿ. ಕನ್ನಡದಲ್ಲಿ ಕಲಿತರೆ ಪರೀಕ್ಷಾ ಕೋಣೆಯಲ್ಲಿ ಕನ್ನಡದಲ್ಲಿ ಉತ್ತರ ಗೊತ್ತಿರುತ್ತದೆ, ಹಿಂದಿಯಲ್ಲೂ ಆಯಾ ಕ್ಷಣದಲ್ಲಿ ಪದಗಳು ಸಿಗುತ್ತವೆ. ಆದರೆ ಆಂಗ್ಲ ಭಾಷಾ ವೊಕ್ಯಾಬುಲರಿ ಮರೆತು ಹೋಗಿರುತ್ತದೆ. ನಮಗೆ ಬೇಕಾದ ಪದ ನೆನಪಿಗೆ ಬಾರದು. ಆದ ಕಾರಣ ಒಂದು ಭಾಷೆಯನ್ನು ಕಲಿಯುವಾಗ ಅರ್ಥ ಗೊತ್ತಿರಲಿ, ಆದರೆ ಕಲಿಕೆ ಅದೇ ಭಾಷೆಯಲ್ಲಿ ಇರಲಿ.

*ಪ್ರಶ್ನಾ ಪತ್ರಿಕೆ ರೂಪ ಹೇಗಿದೆ?
ಪ್ರಶ್ನಾ ಪತ್ರಿಕೆಯ ಸ್ವರೂಪ ಹೇಗಿದೆ ಎಂದರೆ ನಿಮಗೆ ಭಾಷೆ ಗೊತ್ತಿದ್ದರೆ ನೋಟ್ಸ್, ಪಠ್ಯ ಪುಸ್ತಕ ಓದದೆಯೇ ಉತ್ತೀರ್ಣರಾಗಬಹುದು ಈಗ. ಅಂದರೆ ಅಲ್ಲಿ ನಿತ್ಯ ಜೀವನದ ಭಾಷಾ ಬಳಕೆಗೆ ಪ್ರಾಮುಖ್ಯತೆ ನೀಡಲಾಗಿದೆ. ಇನ್ನು ಉತ್ತಮ ಅಂಕಗಳು ಬರಬೇಕಾದ ಗುರಿ ನಮ್ಮದು ತಾನೇ? ಹಾಗಿರುವಾಗ ಪಠ್ಯ ವಿಷಯಗಳು ಕೂಡಾ ಇನ್ನುಳಿದ ಅರ್ಧ ಭಾಗ ಅಂಕಗಳನ್ನು ಪಡೆಯಲು ಬೇಕಾಗುತ್ತದೆ. ಎಲ್ಲಾ ಪಾಠಗಳನ್ನು ಅರ್ಥೈಸಿಕೊಂಡು, ಅಲ್ಲಿ ಬರುವ ಸನ್ನಿವೇಶಗಳ ಬಗ್ಗೆ ನಮ್ಮದೇ ಭಾಷೆಯ ಬಳಕೆಯಲ್ಲಿ ತಪ್ಪಿಲ್ಲದೆ ಉತ್ತರ ಬರೆದರೆ ಆಯಿತು. ನಮ್ಮಲ್ಲಿ ಪದ ಸಂಪತ್ತಿನ ಸ್ಟೋರೇಜ್ ಇರಬೇಕಾದ್ದು ಅನಿವಾರ್ಯ. ಅದಕ್ಕಾಗಿ ಪುನರ್ಮನನ,ಮತ್ತೆ ಮತ್ತೆ ಓದು, ಬರೆಯುವುದು ಮುಖ್ಯ.

*ಗ್ರಾಮರ್ ಕಲಿಕೆ ಹೇಗೆ?
ಇನ್ನು ಕಷ್ಟದ ಭಾಗವೆಂದರೆ ಇಂಗ್ಲಿಷ್ ಗ್ರಾಮರ್. ಇದರ ಕಲಿಕೆ ಸುಲಭ ಹೇಗೆಂದರೆ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಹಿಂದಿನ ಸಾಲಿನ ಪ್ರಶ್ನೆ ಪತ್ರಿಕೆ ಹೀಗೆ ಹತ್ತು ಹಲವು ಪ್ರಶ್ನೆ ಪತ್ರಿಕೆಗಳನ್ನು ಬರೆದು ಅಭ್ಯಾಸ ಮಾಡಿದರೆ ಮುಗಿಯಿತು. ಗಣಿತದ ಸೂತ್ರದ ಹಾಗೆ ಅದರ ನಿಯಮಗಳನ್ನು ತಿಳಿದರೆ ಆಯಿತು. ಅದೇ ನಿಯಮವನ್ನು ಪಾಲಿಸಬೇಕು ಅಷ್ಟೇ. ಮುಖ್ಯ ಎಂದರೆ ಕಾಲಗಳು,(ಟೆನ್ಸ್ ಫಾರ್ಮ್ಸ್ ಪ್ರೆಸೆಂಟ್ ಪಾಸ್ಟ್) ಏಕವಚನ ಬಹುವಚನ, (ನಂಬರ್ಸ್ – ಸಿಂಗ್ಯುಲರ್ ಪ್ಲೂರಲ್ಸ್). ಮಾಡಿಫಿಕೇಷನ್ಸ್ ಹಾಗೂ ಅರ್ಥ. ಅರ್ಥ ಕೆಡದ ಹಾಗೆ ಭಾಷಾ ಬಳಕೆ ಮಾಡಬೇಕು. ಇದು ಭಾಷೆಯ ಗುಟ್ಟು.

*ಸುಲಭ ಎಲ್ಲಿ?
ಪ್ರಶ್ನೆ ಪತ್ರಿಕೆ ಮಾದರಿ. ಇಂತಹ ಪ್ರಶ್ನೆಗಳು ಇದೇ ಪ್ರಶ್ನಾ ಸಂಖ್ಯೆಯಲ್ಲಿ ಬರುತ್ತವೆ ಎಂದು ಮಾದರಿ ನೋಡಿದಾಗ ತಿಳಿಯುವುದು. ಉದಾಹರಣೆಗೆ ಕೊನೆಯ ಮೂವತ್ತ ಎಂಟನೆಯ ಪ್ರಶ್ನೆಯು ಪತ್ರ ಲೇಖನ. ಮೂವತ್ತ ಏಳನೆಯ ಪ್ರಶ್ನೆ ಎಸ್ಸೆ ಅಥವಾ ಪ್ರಬಂಧ ಬರಹ. ಮೂವತ್ತ ಆರನೆಯ ಪ್ರಶ್ನೆ ಪದ್ಯದ ಭಾವಾರ್ಥ, ಮೂವತ್ತ ನಾಲ್ಕನೆಯ ಪ್ರಶ್ನೆ ಬಾಯಿಪಾಠ ಮಾಡಿದ ಪದ್ಯ ಬರೆಯುವುದು ಹೀಗೆ ನೆನಪಿಡಬಹುದು. ಅದನ್ನೇ ಕಲಿತಾಗ ಅನುತ್ತೀರ್ಣ ಕಷ್ಟದ ಮಾತು ಬಿಡಿ.

  • ಮತ್ತೇನು ಬೇಕು?
    ಬೇಕಾದುದು ಕಲಿಕೆ ಮತ್ತು ನಮ್ಮ ಮೇಲೆ ನಮಗೆ ನಂಬಿಕೆ. ಕಾನ್ಫಿಡೆನ್ಸ್. ನಾನು ಪ್ರಪಂಚದ ಭಾಷೆ ಕಲಿಯಬಲ್ಲೆ, ಬರೆಯಬಲ್ಲೆ ಎಂಬ ನಮ್ಮ ವಿಶ್ವಾಸ. ಅದನ್ನು ಎಂದಿಗೂ ಮರೆಯಬಾರದು. ನನಗೂ ಇಂಗ್ಲಿಷ್ ಬರುತ್ತದೆ ಎಂಬ ಹೆಮ್ಮೆ ಇರಬೇಕು. ಆಂಗ್ಲರು ಕನ್ನಡ ಕಲಿಯುವುದಕ್ಕಿಂತ ವೇಗವಾಗಿ ನಾವು ಇಂಗ್ಲಿಷ್ ಕಲಿಯುತ್ತೇವೆ. ಅದು ನಮ್ಮ ಪವರ್. ಹಾಗಾಗಿ ಇದು ಕಷ್ಟವೇ ಅಲ್ಲದ ಭಾಷೆ ಎಂಬುದು ತಿಳಿದಿರಬೇಕು.
  • ಟೀಚರ್ಸ್ ಟಿಪ್ಸ್
    ಎಲ್ಲಾ ಮೂವತ್ತೆಂಟು ಪ್ರಶ್ನೆಗಳಿಗೂ ಉತ್ತರ ಬರೆಯಬೇಕು. ಯಾವ ಪ್ರಶ್ನೆಯನ್ನೂ ಉತ್ತರ ಬರೆಯದೆ ಬಾಕಿ ಬಿಡಬಾರದು. ಕೊನೆಯಲ್ಲಿ ಬರೆಯುವ ಎಂದು ಹಾಗೆಯೇ ಬಿಟ್ಟರೆ ಸಮಯ ಸಾಲದೆ ಇರಬಹುದು. ಹೆಸರುಗಳು ಮರೆತು ಹೋಗುವುದಕ್ಕೆ ಮತ್ತು ಕನ್ಫ್ಯೂಸ್ ಆಗುವುದಕ್ಕೆ ನಿಮ್ಮ ತರಗತಿಯ ಮಕ್ಕಳಿಗೆ ಅತವಾ ಹೆಸರು ಇಟ್ಟು ಬಿಡಿ. ಯಾರೋ ಒಬ್ಬ ಅನಂತ್ ತರಹ ವೇಗದ ಓಟಗಾರ, ಇನ್ನೊಬ್ಬ ಸತೀಶ್ ತರಹದ ಕಲಾಕಾರ, ಮತ್ತೊಬ್ಬಳು ಡಿಕ್ಕಿ ಡೋಲ್ಮ ತರಹದ ಸಾಹಸಿ,ಇನ್ನೊಬ್ಬ ಹನೀಫುದ್ದೀನ್ ತರಹ ಮುಂದೆ ಭಾರತೀಯ ಸೇನೆಗೆ ಸೇರಿಕೊಳ್ಳುವ ಆಸೆ ಇರುವವ, ಇನ್ನೊಬ್ಬ ಸ್ವಾಮಿಯ ಹಾಗೆ ಹೆದರು ಪುಕ್ಕಲ ಹೀಗೆಲ್ಲಾ ನೆನಪಿಟ್ಟುಕೊಂಡರೆ ಆಯಿತು. ಅವರ ಬಗ್ಗೆ ಬರೆಯಲು ಸುಲಭ.
    ನಿಮ್ಮ ಗುರಿಯ ಕಡೆ ಗಮನ ಇರಲಿ, ಬದುಕಿನ ಸಾಧನೆಯ ಕಡೆಗೆ ದೃಷ್ಟಿ ಇರಲಿ. ಉದಾತ್ತ ಧ್ಯೇಯಗಳಿರಲಿ. ಈ ಪರೀಕ್ಷೆ ಯಾವ ಲೆಕ್ಕ, ಗೆದ್ದೇ ಗೆಲ್ಲುತ್ತೇನೆ ಎನ್ನುವ ಧೃಢ ನಿಶ್ಯಯ ಸದಾ ಇರಲಿ. ಹೆದರಿಕೆ ದೂರ ಇರಲಿ. ನಮ್ಮ ಬದುಕನ್ನು ಎದುರಿಸಿ, ಸಾಧನೆ ಮೆರೆದು ಸಾಧಕರಾಗ ಬೇಕಾದವರು ನಾವೇ ಅಲ್ಲವೇ? ಈಗಲೇ ಹೆದರಿದರೆ ಹೇಗೆ? ಬದುಕಿನ ಸಣ್ಣ ಹೆಜ್ಜೆ ಇದೊಂದು, ಇದನ್ನು ದಾಟಿ ಇನ್ನೂ ಮುಂದೆ ಗುರಿಯ ತುದಿಗೆ ಏರಬೇಕಿದೆ ನಾವು. ಆಂಗ್ಲ ಭಾಷೆ ಸದಾ ನಮ್ಮೊಂದಿಗೆ ಇರುವ ಗೆಳೆಯ. ನಾವು ಕಲಿತು ಜೊತೆಗೆ ಕರೆದೊಯ್ಯೊಣ. ಸರ್ವರಿಗೂ ಶುಭವಾಗಲಿ.


spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page