25.2 C
Udupi
Monday, April 13, 2026
spot_img
spot_img
HomeBlog🔴 ಕಾರ್ಕಳ : ಹೆಚ್ಚುತ್ತಿರುವ ಜುಗಾರಿ ಅಡ್ಡೆಗಳು…!

🔴 ಕಾರ್ಕಳ : ಹೆಚ್ಚುತ್ತಿರುವ ಜುಗಾರಿ ಅಡ್ಡೆಗಳು…!

🔴 ಪೊಲೀಸರ ದಾಳಿ 9 ಮಂದಿ ವಶಕ್ಕೆ

ಕಾರ್ಕಳದಲ್ಲಿ ಜುಗಾರಿ ಅಡ್ಡೆಗಳಿಗೆ ಕಡಿವಾಣ ಹಾಕಿದ ಪೊಲೀಸರು ಜುಗಾರಿ ಅಡ್ಡೆಗಳ ಸದ್ದನ್ನು ಅಡಗಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ಪುನ: ಆಟ ಶುರು ಮಾಡಿಕೊಂಡಿರುವ ಜುಗಾರಿ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಕಳ ತಾಲೂಕು ಕಸಬಾ ಗ್ರಾಮದ ನಿಟ್ಟೆ ಗಾಜಿಯಾ ಆಸ್ಪತ್ರೆ ಬಳಿಯ ಸಾರ್ವಜನಿಕ ಹಾಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಜಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 9 ಜನ ಆರೋಪಿಗಳು ಸೇರಿದಂತೆ 11,000 ರೂ. ನಗದು ಹಾಗೂ ಆಟಕ್ಕೆ ಬಳಸಿದ್ದ ಇಸ್ಪೀಟ್ – 52 ಟಾರ್ಪಲ್- 1 ಹಾಗೂ ಬಿಳಿ ಬಣ್ಣದ ಪಂಚೆ-1 ಇವುಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಮನಾಥ್‌ ಪಾಠಕ್‌ (77) ,ಜಯಂತ್ (60), ಸತೀಶ್ (49), ಉದಯ್ ಭಿಡೆ ,(63), ಪ್ರಕಾಶ್ (50) ಅನಂತ, (65), ಸೀತಾರಾಮ ( 63) ,ವೆಂಕಟರಮಣ ( 69) ದಿನೇಶ್ ( 68) ಎಂಬವರು ಶನಿವಾರ ಆಸ್ಪತ್ರೆ ಬಳಿಯ ಹಾಡಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಜುಗಾರಿ ಆಟ ಆಡುತ್ತಿರುವಾಗ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ನಗದು ಸಹಿತ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page