💢 ಕಾರ್ಕಳ ,ಮುಲ್ಕಿ ವಲಯ ಸಮಾಜ ಬಂಧುಗಳಿಗೆ ಪ್ರತಿಭಾ ಪುರಸ್ಕಾರ,
💢 ಬ್ಯಾಗ್ ಮತ್ತು ವಿದ್ಯಾರ್ಥಿ ವೇತನ ವಿತರಣೆ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ

ಕ್ಷತ್ರೀಯ ಮರಾಠ ಸಮಾಜ ರಿ ಕಾರ್ಕಳ ಇದರ ಆಶ್ರಯದಲ್ಲಿ ಕಾರ್ಕಳ ಮುಲ್ಕಿ ವಲಯ ಸಮಾಜ ಬಂಧುಗಳಿಗೆ ಪ್ರತಿಭಾ ಪುರಸ್ಕಾರ, ಬ್ಯಾಗ್ ಮತ್ತು ವಿದ್ಯಾರ್ಥಿ ವೇತನ ವಿತರಣೆ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರವನ್ನು ಮೇ 26 ಅದಿತ್ಯವಾರದಂದು ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮರಾಠ ಸಮಾಜದ ಹಿರಿಯರಾದ ಉಮೇಶ್ ರಾವ್ ಬಜಗೋಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ರಮೇಶ್ ರಾವ್ ಬೆಂಗಳೂರು ಅದ್ಯಕ್ಷತೆಯನ್ನು ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಆಡಳಿತ ಮೊಕ್ತೇಸರ್ ಗಿರೀಶ್ ರಾವ್, ಜಾನ್ದೇವ್ ರಾವ್, ಡಾ. ಪಲ್ಲವಿ ಕೀರ್ತನ್ ರಾವ್ ಭಾಗವಹಿಸಲಿದ್ದಾರೆ.
ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೆ.ಕೆ.ಎಂ.ಪಿ. ತಾಲೂಕು ಅದ್ಯಕ್ಷ ಕೀರ್ತನ್ ಲಾಡ್, ಡಾ. ಸುಮತಿ ಪವಾರ್, ಹರೇಂದ್ರ ಕವಡೆ, ಕೃಷ್ಣ ಪವಾರ್ , ಪ್ರಕಾಶ್ ಪವಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜೆಸಿ ರಾಪ್ರೀಯ ತರಬೇತುದಾರ ಹಾಗೂ ಶಿಕ್ಷಕ ರಾಜೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರವನ್ನು ನಡೆಸಿಕೊಡಲಿದ್ದಾರೆ ಎಂದು ಕ್ಷತ್ರೀಯ ಮರಾಠ ಸಮಾಜದ ಅದ್ಯಕ್ಷ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.