ಕಾರ್ಕಳ: ನಗರದ ಕಸಬಾ ಗ್ರಾಮದಲ್ಲಿ ಶಶಿಧರ (75) ಎಂಬವರ ಮನೆಗೆ ನವೆಂಬರ್ 3ರಂದು ರತ್ನಾಕರ ಸುವರ್ಣ ಎಂಬವರ ಅಲೈಟ್ ಕೇರ್ ಸಂಸ್ಥೆಯಿಂದ ಕಾರ್ತಿಕ್ ಎಂಬಾತ ಹೋಮ್ ನರ್ಸ್ ಕೆಲಸಕ್ಕೆಂದು ಬಂದು ಗೂಗಲ್ ಪೇ ಮೂಲಕ ಲಕ್ಷಾಂತರ ರೂ. ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ರತ್ನಾಕರ ಸುವರ್ಣ ಹಾಗೂ ಕಾರ್ತಿಕ್ ಎಂಬವರು ಶಶಿಧರ ಎಂಬವರಿಗೆ ಮೋಸ ಮಾಡುವ ಉದ್ದೇಶದಿಂದಲೇ ನವೆಂಬರ್ 9ರಂದು ಸಂಜೆ 5:30 ಗಂಟೆಗೆ 1ನೇ ಆರೋಪಿ ರತ್ನಾಕರ ಅವರು 2ನೇ ಆರೋಪಿ ಕಾರ್ತಿಕ್ ನಾ ಖಾತೆಗೆ ಗೂಗಲ್ ಪೇ ಮಾಡುವಂತೆ ಶಶಿಧರ್ ಅವರಿಗೆ 10,000 ರೂ. ನೀಡಿ ಒತ್ತಾಯವಾಗಿ ಗೂಗಲ್ ಪೇ ಮಾಡಿಸಿರುತ್ತಾರೆ. ಈ ವೇಳೆ ಗೂಗಲ್ ಪೇ ನ ಪಿನ್ ನಂಬರ್ ಗಮನಿಸಿಕೊಂಡ ಆರೋಪಿ ಕಾರ್ತಿಕ್ ನವಂಬರ್ 10ರಿಂದ ಡಿಸೆಂಬರ್ 8ರವರೆಗೆ ಶಶಿಧರ್ ಅವರ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮೂಲಕ ಒಟ್ಟು 9,80,000 ರೂ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಕಾರ್ಕಳದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.