
ಬೆಳಗಾವಿ: ಸಚಿವ ಕೆ.ಎಚ್ ಮುನಿಯಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ತಿಂಗಳು 30 ರಿಂದ ಹೊಸ ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಹಾಕಲು ಅವಕಾಶ ನೀಡಿದ್ದು ಅರ್ಹರಿಗೆ ಹೊಸ ಕಾರ್ಡ್ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಎಪಿಎಲ್ ಕಾರ್ಡಿಗೆ ಮೊದಲು 15 ಕೆಜಿ ಅಕ್ಕಿ ಕೊಡುತ್ತಿದ್ದೆವು, ಅವರು ತೆಗೆದುಕೊಳ್ಳದ ಕಾರಣ ಅದನ್ನ ನಿಲ್ಲಿಸಿದ್ದೆವು. ಡಿಮ್ಯಾಂಡ್ ಬಂದರೆ ಕೊಡುತ್ತೇವೆ. ಒಂದು ವರ್ಷದಿಂದ ಅಕ್ಕಿ ತೆಗೆದುಕೊಳ್ಳದವರನ್ನು ಅಮಾನತು ಮಾಡಿದ್ದೇವೆ. 10 ಲಕ್ಷ ಅನರ್ಹರನ್ನು ಎಪಿಎಲ್ ಗೆ ಶಿಫ್ಟ್ ಮಾಡಿದ್ದೇವೆ ಎಂದು ತಿಳಿಸಿದರು.





