
ಕಾರ್ಕಳ: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕಳೆದ ಎರಡು ವರ್ಷಗಳಿಂದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಕುರಿತು ವಾಗ್ವಾದ ನಡೆಯುತ್ತಲೇ ಇದ್ದು ಇದೀಗ ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ.
ಕಾಂಗ್ರೆಸ್ ನಾಯಕರು ಫೈಬರ್ ಬಳಸಿ ಪರಶುರಾಮನ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಆರೋಪ ಮಾಡಿದ ಪರಿಣಾಮವಾಗಿ ಸರ್ಕಾರವು ಸಿಓಡಿ ತನಿಕೆಗೂ ಆದೇಶ ನೀಡಿತ್ತು.
ಈ ಪ್ರಕರಣವು ಹೈಕೋರ್ಟ್ ಮೆಟ್ಟಿಲೇರಿದ್ದು ತೀರ್ಪು ಇತ್ಯರ್ಥವಾಗುವ ಮುನ್ನವೇ ಮತ್ತೆ ಪ್ರತಿಮೆಯ ಸ್ಥಾಪನೆಗೆ ಕಾಂಗ್ರೆಸ್ ಒಲವು ವ್ಯಕ್ತಪಡಿಸಿದ್ದು ಹಲವು ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಮುಖಂಡ ಮುನಿಯಲು ಉದಯ್ ಕುಮಾರ್ ಶೆಟ್ಟಿ ಪ್ರತಿಮೆ ಪುನರ್ ಪ್ರತಿಷ್ಠಾಪನೆ ಕೋರಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದು ಇದು ಸಾರ್ವಜನಿಕ ವಲಯದಲ್ಲಿ ತೀರ್ವ ಚರ್ಚೆಗೆ ಕಾರಣವಾಗಿದೆ.