ರೇಷ್ಮಾ ಶೆಟ್ಟಿ,ಗೊರೂರು

ಸುಧಾಕರರೆಂಬ ಅಜೆಕಾರಿನ ಕುವರ
ಕಟ್ಟಿದರು ಜ್ಞಾನಸುಧಾವೆಂಬ ವಿದ್ಯಾಮಂದಿರ
ಸೃಷ್ಟಿಯಾಯಿತು ವಿದ್ಯಾರ್ಥಿಗಳ ಮಹಾಪೂರ
ಬಿತ್ತುತ್ತಿದ್ದಾರೆ ಜ್ಞಾನಾರ್ಜನೆಯ ತತ್ವಸಾರ
ಹೆತ್ತವರೇ ಇವರಿಗೆ ದೇವರಂತೆ
ನಡೆದರು ಆವರ ಮಾರ್ಗದರ್ಶನದಂತೆ
ಬಡತನದಲೂ ಬದುಕ ಬೆಳಗಿಸಿಕೊಂಡರಂತೆ
ಸೋಲಲ್ಲು ಗೆಲುವು ಕಂಡ ಸರದಾರನಂತೆ
ಹೆತ್ತಮ್ಮನ ನೂರರ ಜನ್ಮಸಂಭ್ರಮ
ಮಗ ಗಣಿತದೊಂದಿಗೆ ಸದಾಸಂಗಮ
ಜ್ಞಾನಸರಸ್ವತಿ ಧರೆಗಿಳಿದ ಜ್ಞಾನಸುಧಾಮ
ವಿದ್ಯೆಯಲ್ಲಿಯೇ ಇವರಿಗೆ ವಿಶೇಷಪ್ರೇಮ
ಅಜೆಕಾರಿನ ಮಣ್ಣು ಪಾವನವಾಯ್ತು
ಪದ್ಮನಗರವೆಂಬ ಹೆಸರುಪಡೆಯಿತು
ವಿದ್ಯಾರ್ಥಿಗಳಿಗೆ ಭದ್ರ ಬುನಾದಿಯಾಯ್ತು
ಕೋಟಿ ಕಂಗಳ ಕನಸು ನನಸಾಯ್ತು
ಬೆಳಗಿ ಬಾಳಲಿ ಜ್ಞಾನಸುಧಾ
ಅಚ್ಚಳಿಯದ ಹೆಸರಾಗಲಿ ಸರ್ವಸದಾ
ಅಸ್ತು ಅನ್ನಲಿ ವಿದ್ಯಾದೇವತೆಗಳು
ವಿದ್ಯೆ ಪಡೆಯಲಿ ಮುಂದಿನ ಪೀಳಿಗೆಗಳು








