
ಖ್ಯಾತ ಕನ್ನಡ ನಟಿ ಭಾವನಾ ರಾಮಣ್ಣ ಅವರು ಐವಿಎಫ್ ಚಿಕಿತ್ಸೆಯ ಮೂಲಕ ತಾಯಿಯಾಗಲು ಬಯಸಿ ಇದೀಗ ಅವರಿಗೆ ಎರಡು ವಾರಗಳ ಹಿಂದೆ ಹೆರಿಗೆಯಾಗಿದ್ದು ಈಗ ಅವರು ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಮೂಲಗಳ ಪ್ರಕಾರ, ನಟಿ ಭಾವನಾ ಅವರ ಎರಡು ಮಕ್ಕಳಲ್ಲಿ ಒಂದು ಮಗು ನಿಧನವಾಗಿದ್ದು ಮತ್ತೊಂದು ಮಗು ಕ್ಷೇಮವಾಗಿದೆ ಎಂದು ತಿಳಿದು ಬಂದಿದೆ.
ಒಂದು ಮಗುವಿನಲ್ಲಿ ಏಳು ತಿಂಗಳ ನಂತ್ರ ಸಮಸ್ಯೆ ಕಾಣಿಸಿಕೊಂಡ ಕಾರಣ, 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದ್ದು ಸದ್ಯ ತಾಯಿ ಮಗು ಇಬ್ಬರು ಕ್ಷೇಮವಾಗಿದ್ದಾರೆ.
ಭಾವನಾ ರಾಮಣ್ಣ ಈ ವಯಸ್ಸಿನಲ್ಲಿ ತಾಯಿಯಾಗಲು ನಿರ್ಧರಿಸಿದ ಅವರ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೈದ್ಯಕೀಯ ವರದಿಗಳ ಪ್ರಕಾರ, ಅವರ ಡೆಲಿವರಿ ದಿನಾಂಕವನ್ನು ನವೆಂಬರ್ 2025ರ ಸುಮಾರಿಗೆ ನಿಗದಿಪಡಿಸಲಾಗಿತ್ತು. ಆದರೆ, ಅವಧಿಗೂ ಮೊದಲೇ ಡೆಲಿವರಿ ಆಗಿ ಬಯಸಿದ್ದ ಎರಡು ಮಕ್ಕಳಲ್ಲಿ ಒಂದು ಮಗು ಮಾತ್ರ ದೊರಕಿದೆ ಎಂದು ತಿಳಿದು ಬಂದಿದೆ.