ಸಿದ್ದರಾಮಯ್ಯ ಸರಕಾರದಲ್ಲಿ, ನ್ಯಾಯವನ್ನೇ ಕೇಳಬಾರದೆನ್ನುವ ದಾರಿದ್ರ್ಯದ ಸ್ಥಿತಿ….!
ರಾಜ್ಯ ಬಿಜೆಪಿ ಘಟಕ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಕಿಡಿ
ಹುಬ್ಬಳ್ಳಿ ಹಿಂದೂ ಯುವತಿಯ ಬರ್ಬರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿದ ಕಾರ್ಕಳ ವಿದ್ಯಾರ್ಥಿ ಸಂಘಟನೆ ( ಎಬಿವಿಪಿ) ವಿರುದ್ದ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿರುವುದಕ್ಕೆ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕಿಡಿಕಾರಿದ್ದಾರೆ.
ಅನ್ಯ ಕೋಮಿನ ಜಿಹಾದಿ ಮನಸ್ತಿತಿಯ ಮತಿಯ ವ್ಯಕ್ತಿಯಿಂದ ಹತ್ಯೆಯಾದ ಹದಿಹರೆಯದ ಹಿಂದೂ ಯುವತಿಯೋರ್ವಳ ಸಾವಿಗೆ ನ್ಯಾಯ ಕೇಳಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ ಪ್ರಕರಣ ದಾಖಲಿಸುವುದೆಂದರೆ ರಾಜ್ಯದಲ್ಲಿ ರಾವಣ ಆಡಳಿತವಿದೆಯೆ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ ನ್ಯಾಯವನ್ನೆ ಕೇಳಬಾರದು ಎಂದಾದರೆ ಎಂತಹ ದಾರಿದ್ರ್ಯದ ಸ್ಥಿತಿ ನಮ್ಮ ರಾಜ್ಯಕ್ಕೆ ಬಂದಿದೆ..ಯುವತಿಯನ್ನು ಪೈಶಾಚಿಕವಾಗಿ ಚುಚ್ಚಿದ ದುಷ್ಕರ್ಮಿಯ ಮನೆಗೆ ಭದ್ರತೆ ಕೊಡುತ್ತಾರೆ. ನ್ಯಾಯ ಕೇಳಿದ ವಿದ್ಯಾರ್ಥಿ ಸಂಘಟನೆ ಮೇಲೆ ಎಪ್ ಐ ಆರ್ ಧಾಖಲಿಸಿತ್ತಾರೆ ಎಂದಾದರೆ ಈ ಸರಕಾರದಲ್ಲಿ ಹಿಂದೂಗಳಿಗೆ ಭದ್ರತೆ, ರಕ್ಷಣೆ ಎಷ್ಟರ ಮಟ್ಟಿಗೆ ಕುಸಿದಿದೆ ಎನ್ನುವುದನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು.
ಕಾಂಗ್ರೆಸ್ ಒಲೈಕೆ, ತುಷ್ಟೀಕರಣ ನೀತಿ ಇಷ್ಟೊಂದು ಹೇಯಕರ ಕೃತ್ಯಕ್ಕೆ ಕಾರಣವಾಗಿದೆ. ದುಷ್ಕರ್ಮಿಯ ರಕ್ಷಣೆಗೆ ಕಾಂಗ್ರೆಸ್ ನಿಂತಿರುವುದು ಸ್ಪಷ್ಟ.ಕಾಣದ ಕೈಗಳಲ್ಲ ನೇರ ಸರಕಾರವೇ ಆರೋಪಿಯ ರಕ್ಷಣೆಗೆ ನಿಂತಿದೆ. ಪೊಲೀಸ್ ಬಲದ ಮೂಲಕ ಈ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯರವರೇ ನಿಮ್ಮದೆ ಪಕ್ಷದ ಜನಪ್ರತಿಯ ಮನೆ ಮಗಳು ಹತ್ಯೆಯಾಗಿರುವುದು ಎನ್ನುವುದನ್ನು ನೆನಪಿಡಿ.ನಿಮ್ಮದೆ ಪಕ್ಷದ ಮನೆ ಮಗಳಿಗೆ ರಕ್ಷಣೆ ಕೊಡಲಾಗದ ನಿಮ್ಮಿಂದ ರಾಜ್ಯದ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸಲು ಸಾಧ್ಯವೇ? ರಾಜ್ಯದಲ್ಲಿ ಎಬಿವಿಪಿ ಕಾರ್ಯಕರ್ತರ ಆಕ್ರೋಶದ ಕಟ್ಟೆ ಒಡೆದಿದ್ದು ಅಮಾಯಕ ಯುವತಿಗೆ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಪೊಲೀಸ್ ಪ್ರಯೋಗದ ಮೂಲಕ ಹತ್ತಿಕ್ಕುವ, ತಡೆಯುವ ಕೆಲಸ ನಿಮ್ಮಿಂದ ಆಗುತ್ತಿದೆ. ಹಿಂದೂ ಹೆಣ್ಣುಮಕ್ಕಳ ಜೀವ ರಕ್ಷಣೆಗಾಗಿ ರಸ್ತೆಗಿಳಿಯುವ ಪ್ರತಿಭಟನಕಾರರ ವಿರುದ್ದ ಕಾನೂನು ಕ್ರಮದ ಜಾರಿಗೆ ಮುಂದಾದರೆ ಕೈ ಕಟ್ಟಿ ಕೂರಲು ಸಾಧ್ಯವಿಲ್ಲ. ನಿಮ್ಮದೆ ತಾಳಕ್ಕೆ ಕುಣಿಯುವ, ಕೈಗೊಂಬೆ ಪೊಲೀಸರು ವಿದ್ಯಾರ್ಥಿ ಸಂಘಟನೆಗಳ ಮೇಲೆ ಕ್ರಮಕ್ಕೆ ಮುಂದಾದರೆ ನಾವು ಸುಮ್ಮನಿರಲಾರೆವು ಎಂದಿದ್ದಾರೆ. ಈ ರಾಜ್ಯದಲ್ಲಿ ಯುವಕ- ಯುವ ಸಮೂಹ( ವಿದ್ಯಾರ್ಥಿ ವಿದ್ಯಾರ್ಥಿನಿಯರು) ಜೀವಕ್ಕೆ ನಿಮ್ಮ ಸರಕಾರದಲ್ಲಿ ಬೆಲೆ ಇಲ್ಲ. ರಕ್ಷಣೆ ಕೊಡಬೇಕಾದ ಪೊಲೀಸರೆ ಕಾನೂನು ಕ್ರಮದ ಹೆಸರಲ್ಲಿ ಭಕ್ಷಕರಾಗುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಪ್ರಧಾನಿ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.