26.8 C
Udupi
Monday, April 13, 2026
spot_img
spot_img
HomeBlogಹಿಂದೂ ಹುಡುಗಿಯರು ಜಿಮ್ ಗೆ ಹೋಗದಂತೆ ಸಲಹೆ ನೀಡಿ ವಿವಾದಕ್ಕೆ ಸಿಲುಕಿದ ಬಿಜೆಪಿ ಶಾಸಕ

ಹಿಂದೂ ಹುಡುಗಿಯರು ಜಿಮ್ ಗೆ ಹೋಗದಂತೆ ಸಲಹೆ ನೀಡಿ ವಿವಾದಕ್ಕೆ ಸಿಲುಕಿದ ಬಿಜೆಪಿ ಶಾಸಕ

ಮುಂಬೈ: ಮಹಾರಾಷ್ಟ್ರ ಬಿಜೆಪಿ ಶಾಸಕ ಗೋಪಿಚಂದ್ ಪಡಲ್ಕರ್ ಬೀಡ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದು, ಈ ವೇಳೆ ಹಿಂದೂ ಹುಡುಗಿಯರು ಜಿಮ್ ಗೆ ಹೋಗಬಾರದು ಎಂದು ಸಲಹೆ ನೀಡಿದ್ದು ಇದೀಗ ಈ ಹೇಳಿಕೆ ವಿವಾದಕ್ಕೀಡಾಗಿದೆ.

ಕಾಲೇಜಿಗೆ ಹೋಗುವ ಹಿಂದೂ ಹುಡುಗಿಯರು ಜಿಮ್ ಗೆ ಹೋಗಬಾರದು. ಬದಲಾಗಿ ಮನೆಯಲ್ಲಿ ಯೋಗ ಮಾಡಬೇಕು. ಯಾಕೆಂದರೆ ದೊಡ್ಡ ಪಿತೂರಿ ನಡೆಯುತ್ತಿದೆ. ಅದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ. ತುಂಬಾ ಒಳ್ಳೆಯವರು ಅಥವಾ ಚೆನ್ನಾಗಿ ಮಾತನಾಡುವವರಿಂದ ಮೋಸ ಹೋಗಬೇಡಿ ಎಂದು ಪಡಲ್ಕರ್ ಹೇಳಿದ್ದು ಇನ್ನೊಂದು ಸಮುದಾಯದ ಸದಸ್ಯರು ಮಹಿಳೆಯರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ಜನರು ಜಿಮ್ ನಲ್ಲಿ ತಮ್ಮ ಟ್ರೈನರ್ ಯಾರು ಎಂಬುದರ ಬಗ್ಗೆ ಗಮನಹರಿಸಬೇಕು. ಮನೆಯಲ್ಲಿ ಚಿಕ್ಕ ಹುಡುಗಿಯರು ಜಿಮ್ ಗೆ ಹೋದರೆ ಅವರಿಗೆ ಸಲಹೆ ನೀಡಬೇಕು. ಹುಡುಗಿಯರು ಮನೆಯಲ್ಲಿ ಯೋಗಾಭ್ಯಾಸ ಮಾಡಬೇಕು. ಜಿಮ್ ಗೆ ಹೋಗುವ ಅಗತ್ಯವಿಲ್ಲ. ಯಾಕೆಂದರೆ ನಿಮ್ಮ ಟ್ರೈನರ್ ನಿಮಗೆ ಮೋಸ ಮಾಡುತ್ತಿದ್ದಾರೆ, ಅನ್ಯಾಯ ಮಾಡುತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page