24.3 C
Udupi
Sunday, August 31, 2025
spot_img
spot_img
HomeBlogಹಿಂದೂ ಸಂತರು ಹಾಗೂ ಸಂಪ್ರದಾಯಗಳ ತೇಜೋವಧೆ ಮಾಡುವ ಮಹಾರಾಜ್ ಚಲನಚಿತ್ರವನ್ನು ನಿಷೇಧಿಸಿ..!

ಹಿಂದೂ ಸಂತರು ಹಾಗೂ ಸಂಪ್ರದಾಯಗಳ ತೇಜೋವಧೆ ಮಾಡುವ ಮಹಾರಾಜ್ ಚಲನಚಿತ್ರವನ್ನು ನಿಷೇಧಿಸಿ..!

ಹಿಂದೂ ಜನಜಾಗೃತಿ ಸಮಿತಿಯಿಂದ ಪುಣೆಯಲ್ಲಿ ಆಂದೋಲನದ ಮೂಲಕ ಕೇಂದ್ರ ಸರಕಾರಕ್ಕೆ ಆಗ್ರಹ

ಭಾರತವು ಸಾಧು-ಸಂತರ ಭೂಮಿಯಾಗಿದೆ. ಸಂತರು ಜಗತ್ತಿನಾದ್ಯಂತ ಸಂಚರಿಸಿ ಭಾರತೀಯ ಸಂಸ್ಕೃತಿ, ಧರ್ಮ, ಜ್ಞಾನ, ಕಲೆ, ಸಭ್ಯತೆ, ಸದಾಚಾರ ಹಾಗೂ ಭಗವದ್ ಭಕ್ತಿ ಕಲಿಸಿ ಸಮಾಜಕ್ಕೆ ಆದರ್ಶ ಜೀವನವನ್ನು ನಡೆಸಲು ಪ್ರೋತ್ಸಾಹಿಸುತ್ತಿದ್ದಾರೆ. ಹೀಗಿರುವಾಗ ನಟ ಅಮೀರ್ ಖಾನ್ ಅವರ ಮಗ ಜುನೈದ್ ಖಾನ್ ಹಾಗೆಯೇ ‘ಯಶರಾಜ್ ಫಿಲ್ಮ್ಸ್’ ಇವರ ‘ಮಹಾರಾಜ್” ಚಲನಚಿತ್ರನಲ್ಲಿ ಸಾಧುಸಂತರನ್ನು ದುರಾಚಾರಿಗಳು, ಗೂಂಡಾಗಳೆಂದು ಬಿಂಬಿಸಿ ಅವರ ತೇಜೋವಧೆ ಮಾಡಲಾಗಿದೆ. ಆದ್ದರಿಂದ ಈ ಚಲನಚಿತ್ರವನ್ನು ಕೂಡಲೇ ನಿಷೇಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಂದೋಲನದ ಮಾಧ್ಯಮದಿಂದ ಆಗ್ರಹಿಸಿದೆ. ಜೂನ್‌ 12 ರಂದು ಮಧ್ಯಾಹ್ಮ 4 ಗಂಟೆಗೆ ಪುಣೆಯ ಕೊಥರೂಡ ಎಂಬಲ್ಲಿನ ಶ್ರೀ ಶಿವಾಜಿ ಮಹಾರಾಜರ ಪುತ್ಥಳಿಯ ಸಮೀಪ ಈ ಆಂದೋಲನ ಮಾಡಲಾಯಿತು. ಈ ಆಂದೋಲನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪರಾಗ ಗೋಖಲೆ ಇವರು ಸಹಿತ ಸಮವಿಚಾರಿ ಸಂಘಟನೆಗಳೂ ಪಾಲ್ಗೊಂಡಿದ್ದವು.

ಅಮೀರ್ ಖಾನ್ ಈ ಹಿಂದೆಯೂ ‘ಪಿಕೆ’ ಚಲನಚಿತ್ರದಲ್ಲಿಯೂ ಭಗವಾನ ಶಿವನ ಬಗ್ಗೆ ಅವಹೇಳನಕಾರಿ ದೃಶ್ಯಗಳು ಮತ್ತು ಆಕ್ಷೇಪಾರ್ಹ ಸಂಭಾಷಣೆಗಳನ್ನು ತೋರಿಸಲಾಗಿತ್ತು. ಹಿಂದೂ ಸಂತರನ್ನು ಗೂಂಡಾಗಳಂತೆ ತೋರಿಸಲಾಗಿತ್ತು. ಈಗ ಅದನ್ನೇ ಅವರ ಮಗ ‘ಮಹಾರಾಜ್’ ಚಲನಚಿತ್ರದಲ್ಲೂ ಮಾಡುತ್ತಿದ್ದಾರೆ. 150 ವರ್ಷಗಳ ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ನಡೆದ ಘಟನೆಯಿಂದ ಇಂದು ಮತ್ತೊಮ್ಮೆ ಸಾಧುಸಂತರು ಮತ್ತು ವಲ್ಲಭ ಸಂಪ್ರದಾಯದ ಬಗ್ಗೆ ಸುಳ್ಳು ಚಿತ್ರಣವನ್ನು ಸೃಷ್ಟಿಸಲಾಗುತ್ತಿದೆ. ಈ ಚಲನಚಿತ್ರದ ಮೂಲಕ ದೇಶದೆಲ್ಲೆಡೆ ಸಾಧುಸಂತರ ಹಾಗೂ ವಲ್ಲಭ ಸಂಪ್ರದಾಯದ ತೇಜೋವಧೆ ಮಾಡುವ ಷಡ್ಯಂತ್ರ ಮಾಡಲಾಗುತ್ತಿದೆ. ಈ ಚಲನಚಿತ್ರದಲ್ಲಿ ಸಾಧು-ಸಂತರು ದುರಾಚಾರಿಗಳು ಮತ್ತು ಕಾಮುಕರಾಗಿರುತ್ತಾರೆಂದು ಚಿತ್ರಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸಲಾಗಿದೆ ಮತ್ತು ಆ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವಾದರೆ ಜುನೈದ್ ಖಾನ್, ಯಶರಾಜ್ ಫಿಲ್ಮ್ಸ್ ಮತ್ತು ನೆಟ್‌ಫ್ಲಿಕ್ಸ್ ಎಲ್ಲರೂ ಹೊಣೆಯಾಗುತ್ತಾರೆ.
ಜುನೈದ್ ಖಾನ್, ಅಮೀರ್ ಖಾನ್, ಯಶರಾಜ್ ಫಿಲ್ಮ್ಸ್ ಮತ್ತು ನೆಟ್‌ಫ್ಲಿಕ್ಸ್ ಗಳು ಮದರಸಾಗಳಲ್ಲಿ ಮೌಲ್ವಿಗಳಿಂದ ಹುಡುಗರು ಮತ್ತು ಹುಡುಗಿಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಚಲನಚಿತ್ರವನ್ನು ನಿರ್ಮಿಸುತ್ತದೆಯೇ ? ಸಣ್ಣ ಮಕ್ಕಳ ಬುದ್ಧಿ ಭ್ರಮಣೆ ಮಾಡಿ ಜಿಹಾದಿ ಕೃತ್ಯಕ್ಕಾಗಿ ಪ್ರಚೋದನೆ ಮಾಡಿ ಅವರಿಂದ ಜಿಹಾದಿ ಕೃತ್ಯಗಳನ್ನು ಮಾಡಿಸಿಕೊಳ್ಳಲಾಗುತ್ತದೆ, ಈ ಬಗ್ಗೆ ಚಲನಚಿತ್ರ ನಿರ್ಮಿಸುವರೇ ? ಚರ್ಚ್ ಅಥವಾ ಚರ್ಚ್ ನಡೆಸುವ ವಸತಿನಿಲಯಗಳಲ್ಲಿ ಕ್ರೈಸ್ತ ಧರ್ಮಗುರುಗಳಿಂದಾಗುವ ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಅವರು ಚಲನಚಿತ್ರವನ್ನು ಮಾಡುತ್ತಾರೆಯೇ ? ಅಂತಹ ವಿಷಯಗಳ ಮೇಲೆ ಚಲನಚಿತ್ರಗಳನ್ನು ಮಾಡಲು ಬಾಲಿವುಡ್ ಧೈರ್ಯ ಮಾಡುವುದಿಲ್ಲ; ಆದರೆ ಹಿಂದೂ ಸಂತರು, ಹಿಂದೂ ಧಾರ್ಮಿಕ ಆಚರಣೆಗಳನ್ನು ಸುಲಭವಾಗಿ ಗುರಿ ಮಾಡುತ್ತಾರೆ. ಹಿಂದೂಗಳು ಸಹಿಷ್ಣುಗಳಾಗಿದ್ದರಿಂದ ಮತ್ತು ‘`ಸೆಕ್ಯುಲರಿಸಂ’ ಹೆಸರಿನಲ್ಲಿ ಕೇವಲ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ತುಳಿಯಲಾಗುತ್ತದೆ. ಇದನ್ನು ಎಂದಿಗೂ ಸಹಿಸುವುದಿಲ್ಲ. ಈ ಚಲನಚಿತ್ರದ ವಿರುದ್ಧ ದೇಶಾದ್ಯಂತ ಆಕ್ರೋಶದ ಅಲೆ ಎದ್ದಿದೆ. ಸರ್ಕಾರ ಹಿಂದೂಗಳ ಸಹನೆಗೆ ಅಂತ್ಯ ಕಾಣಬಾರದು. ಸರ್ಕಾರ ಕೂಡಲೇ ಈ ಚಲಚಿತ್ರವನ್ನು ನಿಷೇಧಿಸಬೇಕು. ಅಲ್ಲದೆ, ದೇವತೆ, ಧರ್ಮ, ಸಂತರ ಅವಹೇಳನ ತಡೆಯಲು ದೇಶಾದ್ಯಂತ ‘ಧರ್ಮನಿಂದನೆ ತಡೆ ಕಾನೂನು’ ಜಾರಿಗೊಳಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಗ್ರಹಿಸಲಾಯಿತು.

ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ, ಸಂಪರ್ಕ: 9987966666

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page