ಪೊಲೀಸರ ಕ್ರಮಕ್ಕೆ, ಹಿಂದೂ ಜಾಗರಣ ವೇದಿಕೆ ತೀವ್ರ ಖಂಡನೆ

ದೆಹಲಿ ಸ್ಪೋಟದ ಬಗ್ಗೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಹಿಂದೂ ಮುಖಂಡ ರತ್ನಾಕರ್ ಅಮೀನ್ ಬಂಧನದ ವಿಚಾರವಾಗಿ ಉಡುಪಿ ಪೋಲೀಸರ ಕ್ರಮಕ್ಕೆ ಹಿಂದೂ ಜಾಗರಣ ವೇದಿಕೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಸ್ವಯಂ ಪ್ರೇರಿತ ಕೇಸು ದಾಖಲಿಸುವ ಪೋಲಿಸರು ,ಈಗಾಗಲೇ ಕಾರ್ಕಳದಲ್ಲಿ ದಾಖಲಾಗಿರುವ
ಜಿಂಕೆ ಮಾಂಸ ಪತ್ತೆ ಪ್ರಕರಣದ ಆರೋಪಿಯ ಬಂಧನ ಇನ್ನು ಆಗಿಲ್ಲ.ದನದ ಮಾಂಸ ಮನೆಯಲ್ಲಿ ಮಾಡಿ ಇಟ್ಟ ವ್ಯಕ್ತಿಯ ಬಂಧನವಾಗಿಲ್ಲ .ಜನಿವಾರ ತೆಗಿಸಿದ ಶಿಕ್ಷಕನ ವಿರುದ್ಧವು ಕ್ರಮ ಕೈಗೊಂಡಿಲ್ಲ .
ಸುಖಾಸುಮ್ಮನೆ ಹಿಂದೂ ಮುಖಂಡರ ಮೇಲೆ ಸ್ವಯಂಪ್ರೇರಿತ ಕೇಸು ದಾಖಲಿಸುವ ಪೋಲೀಸರ ಕ್ರಮವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಹಿಂದು ಜಾಗರಣ ವೇದಿಕೆಯ ಕಾರ್ಕಳ ತಾಲೂಕು ಸಂಯೋಜಕ್ ಸುಜಿತ್ ಸಪಲಿಗೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.






