28.3 C
Udupi
Monday, February 16, 2026
spot_img
spot_img
HomeBlogಹಿಂದೂ ಜನಜಾಗೃತಿ ಸಮಿತಿಯ ಹೋರಾಟಕ್ಕೆ ಸಂದ ಜಯ!

ಹಿಂದೂ ಜನಜಾಗೃತಿ ಸಮಿತಿಯ ಹೋರಾಟಕ್ಕೆ ಸಂದ ಜಯ!

spot_imgspot_img

ಭಗವಾನ್ ಶಿವ ಮತ್ತು ಶ್ರೀ ಗಣೇಶನನ್ನು ಅವಮಾನಿಸಿದ ಜಾಹೀರಾತನ್ನು ಹಿಂಪಡೆದ ಕಂಪನಿ,ಲಿಖಿತ ಕ್ಷಮೆಯಾಚನೆ…!

ರಾಯಪುರ (ಛತ್ತೀಸ್‌ಗಢ): ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಛತ್ತೀಸ್‌ಗಢದ ಪ್ರಮುಖ ದಿನಪತ್ರಿಕೆಗಳಾದ ‘ದೈನಿಕ ಭಾಸ್ಕರ್’ ಮತ್ತು ‘ಹರಿಭೂಮಿ’ಯಲ್ಲಿ ಭಗವಾನ್ ಶಿವ ಮತ್ತು ಶ್ರೀ ಗಣೇಶನನ್ನು ವಾಣಿಜ್ಯ ಜಾಹೀರಾತುಗಳಲ್ಲಿ ಅನುಚಿತವಾಗಿ ಬಳಸಿಕೊಂಡ ‘ಶ್ರೀ ಗಣೇಶ್ ಗ್ಲೋಬಲ್ ಗುಲಾಲ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ನಡೆಸಿದ ತೀವ್ರ ಪ್ರತಿಭಟನೆಗೆ ದೊಡ್ಡ ಯಶಸ್ಸು ಸಿಕ್ಕಿದೆ. ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕರಾದ ಶ್ರೀ. ಸುನೀಲ್ ಘನವಟ್ ಅವರು ಈ ಅವಮಾನಕಾರಿ ಜಾಹೀರಾತಿನ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ ನಂತರ, ಕಂಪನಿಯು ಲಿಖಿತವಾಗಿ ಬೇಷರತ್ ಕ್ಷಮೆಯಾಚಿಸಿದೆ.

ಜಾಹೀರಾತಿನಲ್ಲಿ ತಪ್ಪೇನಿತ್ತು?:
ಈ ಜಾಹೀರಾತಿನಲ್ಲಿ ವ್ಯಾವಹಾರಿಕ ಲಾಭಕ್ಕಾಗಿ ಅತ್ಯಂತ ಆಕ್ಷೇಪಾರ್ಹ ಮತ್ತು ಅವಮಾನಕಾರಿ ಚಿತ್ರಣವನ್ನು ನೀಡಲಾಗಿತ್ತು:
ಜಾಹೀರಾತಿನಲ್ಲಿ ಶ್ರೀ ಗಣೇಶನ ಕೈಯಲ್ಲಿ ‘ಗುಲಾಲ್’ ಮತ್ತು ‘ಠಂಡೈ’ ಪ್ಯಾಕೆಟ್‌ಗಳನ್ನು ನೀಡಲಾಗಿತ್ತು, ಇದು ದೇವತೆಗಳನ್ನು ಮಾಡೆಲ್‌ಗಳಂತೆ ಬಿಂಬಿಸಿದಂತಿದೆ.

ಮಹಾಶಿವರಾತ್ರಿಯ ಸಂದರ್ಭದಲ್ಲಿ ಶ್ರೀ ಗಣೇಶನನ್ನು ಒಬ್ಬ ‘ಸೇಲ್ಸ್‌ಮನ್’ (ಮಾರಾಟಗಾರ) ರೀತಿ ತೋರಿಸುವ ಮೂಲಕ ಆತನ ದಿವ್ಯ ಸ್ವರೂಪವನ್ನು ವ್ಯಾಪಾರೀಕರಣಗೊಳಿಸಲಾಗಿತ್ತು.
ಅಲ್ಲದೆ, ಜಾಹೀರಾತಿನಲ್ಲಿ ಭಗವಾನ್ ಶಿವ ಮತ್ತು ಶಿವಲಿಂಗದ ಸುತ್ತಲೂ ‘ಕ್ಯಾಪ್ಟನ್ ಅಮೆರಿಕಾ’ದಂತಹ ವಿದೇಶಿ ಕಾಲ್ಪನಿಕ ಪಾತ್ರಗಳನ್ನು ಮತ್ತು ಇತರ ಉತ್ಪನ್ನಗಳನ್ನು ಚಿತ್ರಿಸಿದ್ದು ಹಿಂದೂಗಳ ಶ್ರದ್ಧೆಯ ಘೋರ ಅವಮಾನ ಮತ್ತು ಅಪಹಾಸ್ಯವಾಗಿತ್ತು.

ತಪ್ಪೊಪ್ಪಿಕೊಂಡ ಕಂಪನಿ ! :
ಪ್ರತಿಭಟನೆಯ ನಂತರ ಕಂಪನಿಯ ನಿರ್ದೇಶಕ ಉಮಂಗ್ ಗೋಯಲ್ ಅವರು, ಶ್ರೀ ಗಣೇಶನ ಕೈಯಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದು ಒಂದು ‘ದೊಡ್ಡ ಮತ್ತು ಅಜಾಗರೂಕತೆಯ ತಪ್ಪು’ ಎಂದು ಒಪ್ಪಿಕೊಂಡಿದ್ದಾರೆ. ಈ ದುರದೃಷ್ಟಕರ ಘಟನೆಯು ಅಚಾತುರ್ಯದಿಂದ ಸಂಭವಿಸಿದೆ ಮತ್ತು ಇದಕ್ಕಾಗಿ ನಾವು ಸಮಸ್ತ ಹಿಂದೂ ಸಮಾಜದ ಕ್ಷಮೆ ಯಾಚಿಸುತ್ತೇವೆ ಎಂದು ಕಂಪನಿಯು ಪತ್ರದಲ್ಲಿ ಸ್ಪಷ್ಟಪಡಿಸಿದೆ. ಜೊತೆಗೆ, ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ವಾಗ್ದಾನ ಮಾಡಿದೆ.

ಹಿಂದೂ ಜನಜಾಗೃತಿ ಸಮಿತಿಯ ಸ್ಪಷ್ಟ ನಿಲುವು:
ಜಾಹೀರಾತುಗಳಿಗಾಗಿ ಹಿಂದೂ ದೇವತೆಗಳನ್ನು ಬಳಸಿಕೊಳ್ಳುವುದು ಅವರ ಪವಿತ್ರತೆ ಮತ್ತು ದಿವ್ಯತೆಗೆ ಮಾಡುವ ಅಪಮಾನವಾಗಿದೆ. ಇತರ ಧರ್ಮಗಳ ಸಂಕೇತಗಳ ಬಗ್ಗೆ ಯಾವ ರೀತಿಯ ಸಂವೇದನಾಶೀಲತೆಯನ್ನು ತೋರಿಸಲಾಗುತ್ತದೆಯೋ, ಅಷ್ಟೇ ಗಂಭೀರತೆಯನ್ನು ಹಿಂದೂಗಳ ಶ್ರದ್ಧಾಸ್ಥಾನಗಳ ಬಗ್ಗೆಯೂ ಹೊಂದಿರಬೇಕು. ಯಾವುದೇ ಕಂಪನಿಗೆ ತನ್ನ ವಸ್ತುಗಳ ಮಾರಾಟವನ್ನು ಹೆಚ್ಚಿಸಲು ನಮ್ಮ ಆರಾಧ್ಯ ದೈವಗಳನ್ನು ಅವಮಾನಿಸುವ ಹಕ್ಕಿಲ್ಲ. ‘ಸೃಜನಶೀಲತೆ’ಯ ಹೆಸರಿನಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುವವರ ವಿರುದ್ಧ ಕಾನೂನು ಹೋರಾಟ ಮತ್ತು ಜನಜಾಗೃತಿ ನಿರಂತರವಾಗಿ ಮುಂದುವರಿಯಲಿದೆ ಎಂದು ಸಮಿತಿಯು ಎಚ್ಚರಿಸಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ಸಂಘಟಕರಾದ ಸುನಿಲ್ ಘನವಟ್ ತಿಳಿಸಿದ್ದಾರೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page