
ದೆಹಲಿ: ಸಿಎಂ ರೇಖಾ ಗುಪ್ತಾ ನೇತೃತ್ವದ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು ಅದೇನೆಂದರೆ ದೆಹಲಿ ಬಿಜೆಪಿ ಸರ್ಕಾರದಿಂದ ಹೋಳಿ, ದೀಪಾವಳಿ ಹಬ್ಬಕ್ಕೆ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಘೋಷಿಸಿದೆ.
ಮೂಲಗಳ ಪ್ರಕಾರ ಸುಮಾರು 1. 75 ಮಿಲಿಯನ್ ಪಡಿತರ ಚೀಟಿ ಫಲಾನುಭವಿಗಳು ಬಂಪರ್ ಆಫರ್ ನ ಪ್ರಯೋಜನ ಪಡೆಯಲಿದ್ದು ಸರ್ಕಾರವೇ ಗ್ಯಾಸ್ ಗಾಗಿ ಫಲಾನುಭವಿಗಳ ಖಾತೆಗಳಿಗೆ 853 ರೂ. ಅನ್ನು ಜಮೆ ಮಾಡಲಿದೆ ಎಂದು ತಿಳಿದು ಬಂದಿದೆ.



















