26.8 C
Udupi
Monday, April 13, 2026
spot_img
spot_img
HomeBlogಹಣ್ಣಿನ ಪಾನೀಯ ಸೇರಿದಂತೆ ಹಲವು ಪಾನಿಯಗಳ ಮೇಲೆ ಒಆರ್‌ಎಸ್ ಎಂದು ಬಳಕೆ ನಿಷೇಧ: 8 ವರ್ಷಗಳ...

ಹಣ್ಣಿನ ಪಾನೀಯ ಸೇರಿದಂತೆ ಹಲವು ಪಾನಿಯಗಳ ಮೇಲೆ ಒಆರ್‌ಎಸ್ ಎಂದು ಬಳಕೆ ನಿಷೇಧ: 8 ವರ್ಷಗಳ ಕಾನೂನು ಹೋರಾಟ ಗೆದ್ದ ವೈದ್ಯೆ

ಹೈದರಾಬಾದ್ : ಕಳೆದ 8 ವರ್ಷಗಳಿಂದ ಹೈದರಾಬಾದ್ ಮೂಲದ ವೈದ್ಯೆ ನಕಲಿ ಒಆರ್‌ಎಸ್ ಲೇಬಲ್ ಬಳಕೆ ಕುರಿತು ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದು ಕೊನೆಗೂ ಇದೀಗ ಇವರ ಹೋರಾಟಕ್ಕೆ ಜಯ ಸಿಕ್ಕಿದೆ.

ಇದೀಗ ಆಹಾರ ಉತ್ಪನ್ನಗಳಲ್ಲಿ ಪ್ರಮುಖವಾಗಿ ಹಣ್ಣಿನ ಪಾನೀಯ ಮೇಲೆ ಒಆರ್‌ಎಸ್ ಎಂದು ಲೇಬಲ್ ಬಳಕೆ ಮಾಡುವುದನ್ನು FSSAI ನಿಷೇಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಸೂತ್ರಗಳನ್ನು ಒಳಗೊಂಡ ಪಾನೀಯ ಮಾತ್ರ ಒಆರ್‌ಎಸ್ ಎಂದು ಲೇಬಲ್ ಬಳಕೆ ಮಾಡಬಹುದು. ಇನ್ನುಳಿದ ಪಾನೀಯಗಳು ಒಆರ್‌ಎಸ್ ಅಲ್ಲ ಎಂದು ತಿಳಿಸಿದೆ.

ಈ ಕುರಿತು ಸಂಭ್ರಮ ಹಂಚಿಕೊಂಡ ಶಿವರಂಜನಿ ಸಂತೋಷ್, ಭಾವುಕರಾಗಿದ್ದು ಜನರನ್ನು ತಪ್ಪುದಾರಿಗೆ ಏಳೆಯುವ ಉತ್ಪನ್ನಗಳ ಕುರಿತು ಹೋರಾಟ ಮಾಡುತ್ತಾ ಬಂದಿದ್ದೇನೆ. ಇದರ ನಡುವೆ ಹಲವು ಉತ್ಪನ್ನಗಳು,ಕಂಪನಿಗಳು ನನ್ನ ಹೋರಾಟವೇ ತಪ್ಪು, ಕೇವಲ ಪ್ರಚಾರಕ್ಕಾಗಿ ಎಂದು ಬಿಂಬಿಸುವ ಪ್ರಯತ್ನವೂ ನಡೆದಿತ್ತು. ಬಾರಿ ಟೀಕೆ, ವಿರೋಧಗಳನ್ನು ಎದುರಿಸಿದ್ದೇನೆ. ಆದರೆ ಕೊನೆಗೂ ಹೋರಾಟಕ್ಕೆ ಗೆಲುವಾಗಿದೆ ಎಂದು ಶಿವರಂಜನಿ ಸಂತೋಷ್ ಕಣ್ಣೀರಿಟ್ಟಿದ್ದಾರೆ.

ಒಆರ್‌ಎಸ್ ಬದಲು ತಮ್ಮ ಪಾನೀಯದಲ್ಲಿರುವ ಸೂತ್ರಗಳು, ಅಂಶಗಳನ್ನು ಆಧರಿಸಿ ಎನರ್ಜಿ ಡ್ರಿಂಕ್, ಹೈಡ್ರೇಶನ್ ಡ್ರಿಂಕ್, ಎಲೆಕ್ಟ್ರೋಲೈಟ್ ಡ್ರಿಂಕ್ ಎಂದು ಹೆಸರಿಸಲು ಸೂಚಿಸಿದೆ. ಗ್ರಾಹಕರನ್ನು ತಪ್ಪು ದಾರಿಗೆ ಏಳೆಯವ, ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮದ ಎಚ್ಚರಿಕೆಯನ್ನು FSSAI ನೀಡಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page