
ಜೂನ್.26 ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಉಷಾ ಪಡಿವಾಳ್ ಸ್ವಾಗತಿಸಿ ಜ್ಯೋತಿ ಪ್ರಜ್ವಲಿಸುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮಕ್ಕೆ ಯೋಗ ತರಬೇತುದಾರರಾಗಿ ಆಗಮಿಸಿದ ಶ್ರೀಮತಿ ರಕ್ಷಾ ಪ್ರಭಾತ್ ಕುಮಾರ್ ಇವರು ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಕಾರ್ಯಕ್ರಮವನ್ನು ಯೋಗಾಸನದಿಂದ ಪ್ರಾರಂಭಿಸಿದರೆ ಓದಿನಲ್ಲಿ ಏಕಾಗ್ರತೆ ಹೊಂದಲು ಸಾಧ್ಯ, ಉತ್ತಮ ಆರೋಗ್ಯಕ್ಕಾಗಿ ಯೋಗದ ಮಹತ್ವ ಬಹಳಷ್ಟಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಶ್ರೀ ನವೀನ್ ಕುಮಾರ್ ಹೆಚ್ ದೈಹಿಕ ಶಿಕ್ಷಕರಾದ ಶ್ರೀ ಪ್ರಭಾಕರ್ ಜೈನ್ ಹಾಗೂ ಶಾಲಾ ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯೋಗಾಸನದ ಕೆಲವು ಆಸನಗಳನ್ನು ಪ್ರದರ್ಶಿಸುವ ಮೂಲಕ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಹಿರಿಯ ಶಿಕ್ಷಕರಾದ ಯೋಗರಾಜ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.