21.3 C
Udupi
Monday, December 15, 2025
spot_img
spot_img
HomeBlogಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ, ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ

ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ, ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ

ಜೀವನದಲ್ಲಿ ಹಠ ಮತ್ತು ಛಲ ಇದ್ದರೆ ಏನನ್ನು ಸಾಧಿಸಬಹುದು: ಕುಮಾರ್ ಪೆರ್ನಾಜೆ


ಪೆರ್ನಾಜೆ:ಪ್ರತಿಭೆ ಎಲ್ಲರಲ್ಲೂ ಇದೆ ಆದರೆ ಅದಕ್ಕೆ ಸೂಕ್ತ ಪ್ರೋತ್ಸಾಹ ವೇದಿಕೆ ಅಗತ್ಯ ಹಾಗೆ ಜೀವನದಲ್ಲಿ ಹಟ ಛಲ ಇದ್ದರೆ ಏನನ್ನು ಸಾಧಿಸಬಹುದು ಎಂದು ಸ್ವರ ಸಿಂಚನ ಸಂಗೀತ ಶಾಲೆ, ವಿಟ್ಲ ಪಡಿಬಾಗಿಲು ಶಾಖೆಯ ದಶ ಸoಭ್ರಮದಲ್ಲಿ ಡಿ 14ರಂದು ವಿಟ್ಲದ ಜಿಎಲ್ ಆಡಿಟೋರಿಯಂ ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕರು ಜೇನು ಗಡ್ಡ ಬರಹಗಾರರು,ಕಲಾ ನಿರ್ದೇಶಕರು, ಕಲಾ ಪೋಷಕರು ಆದ ಕುಮಾರ್ ಪೆರ್ನಾಜೆ ಮಾತನಾಡುತ್ತಾ ಬೆಳೆಯುವವರು ಬೆಳೆಯುತ್ತಲೇ ಇರುತ್ತಾರೆ. ಸ್ವರ ಸಿಂಚನ ಸಂಗೀತ ಶಾಲೆ ಯಶಸ್ಸಿನತ್ತ ಸಾಗಲಿ ಎಂದು ಹಾರೈಸಿದರು.


ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ ಮಾಡಿದರು .ಸ್ವರ ಸಿಂಚನ ಪ್ರಶಸ್ತಿ ಪ್ರದಾನವನ್ನು ಸ್ವೀಕರಿಸಿ ಸಂಸ್ಥೆಗೆ ಶುಭ ಹಾರೈಸಿದರು. ದಶಮಾನೋತ್ಸವ ಸನ್ಮಾನವನ್ನು ಎಲ್ಎಂ ಗೋವಿಂದ ನಾಯಕ್ ಪಾಲ್ಹೆಚ್ಚಾರು ಯಕ್ಷಗಾನ ಭಾಗವತರು ಕರಾವಳಿಯ ಗಂಡು ಕಲೆ ಯಕ್ಷಗಾನ ಪ್ರಸಿದ್ಧಿ ಪಡೆದ ಅವರು ಸನ್ಮಾನ ಸ್ವೀಕರಿಸಿ ಸಂಸ್ಥೆಯ ಬಗ್ಗೆ ಹಿತ ನುಡಿದರು. ವಿಟ್ಲ ಅರಮನೆಯ ಕೆ ಕೃಷ್ಣಯ್ಯ ಶ್ರೀ ಭಗವತಿ ದೇವಸ್ಥಾನ ವಿಟ್ಲದ ವ್ಯವಸ್ಥಾಪಕರಾದ ಕೇಶವ ಆರ್ ವಿ ಸಂದರ್ಭೋಚಿತವಾಗಿ ಮಾತನಾಡಿದರು.

ತನ್ನ ಉಸಿರೇ ಸಂಗೀತ ಎನ್ನುವಷ್ಟರ ಮಟ್ಟಿಗೆ ತನ್ನನ್ನು ತೊಡಗಿಸಿಕೊಂಡು ಅದರಲ್ಲಿ ಸಂತೋಷ ನೆಮ್ಮದಿಯನ್ನು ಕಂಡುಕೊಳ್ಳುತ್ತಾ ಇರುವ ಶಿಕ್ಷಕಿ ಸವಿತಾ ಕೋಡಂದೂರ್, ರಘುರಾಮ ಶಾಸ್ತ್ರಿ ಕೋಡಂದೂರ್ ದoಪತಿಯವರನ್ನು ಸ್ವರ ಸಿಂಚನ ಸಂಗೀತ ಶಾಲೆಯ ದಶಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ದಶ ಸಂಭ್ರಮದಲ್ಲಿ ಸನ್ಮಾನಿಸಿದರು.

ಸವಿತಾ ಕೋಡಂದೂರ್ ಗ್ರಾಮೀಣ ಪ್ರದೇಶದಲ್ಲಿದ್ದು ಸಂಗೀತ ಆಸಕ್ತರಿಗೆ ವಿದ್ಯೆಯನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಸಮಾರಂಭದ ಅಧ್ಯಕ್ಷರು ದಶಮಾನೋತ್ಸವ ಸಮಿತಿ ಸ್ವರ ಸಿಂಚನ ಸಂಗೀತ ಶಾಲೆ ಅಧ್ಯಕ್ಷರಾದ ರವಿಶಂಕರ್ ಸಿ ಮೂಡಂಬೈಲು ನುಡಿದರು. ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ವಿವಿಧಡೆಗಳಲ್ಲಿ ಸಂಗೀತ ಸ್ವರ ಸ್ಪರ್ಧೆಯಲ್ಲಿ ವಿಜೇತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಚಾಲಕರು ಸಂಗೀತ ಶಿಕ್ಷಕಿ ಸವಿತಾ ಕೋಡಂದೂರ್ ಸ್ವಾಗತಿಸಿ ವರದಿ ವಾಚಿಸಿದರು ವಿದ್ವಾನ್ ಬಿ.ಗಿರೀಶ್ ಕುಮಾರ್ ಪುತ್ತೂರು, ಗೋಪಾಲಕೃಷ್ಣ ನಾಯಕ್ ಪಡಿಬಾಗಿಲು, ಕೃಷ್ಣ ಭಟ್ ವಿಟ್ಲ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಮೇಶ್ ಬಿಕೆ ವಂದಿಸಿದರು ಪರಮೇಶ್ವರ್ ಹೆಗಡೆ ಚಂದ್ರಶೇಖರ್ ಕೆ ಕಾರ್ಯಕ್ರಮ ನಿರೂಪಿಸಿದರು.

ತದನಂತರ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವಯಲಿನ್ ಕಚೇರಿ,
ಕು.ಸಿಂಚನ ಲಕ್ಷ್ಮಿ ಕೊಡಂದೂರು (ಸಹ ಶಿಕ್ಷಕಿ) ಇವರಿಂದ ಸಂಗೀತ ಹಾಗೂ ವಯಲಿನ್ ಜುಗಲ್ ಬಂದಿ ಪಕ್ಕ ವಾದ್ಯದಲ್ಲಿ ಮೃದಂಗವಾದಕರಾಗಿ ವಿದ್ವಾನ್ ಡಾ.ವಿ.ಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್, ಪಿಟೀಲು ವಾದಕರಾಗಿ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್, ಘಟಂ ವಾದಕರಾಗಿ ವಿದ್ವಾನ್ ಆಲುವ ರಾಜೇಶ್ ಕ್ಯಾಲಿಕಟ್ ಮೃದಂಗ, ಕ್ಶಿತೀಶ ರಾಮ ಕೆ ಎಸ್ ಸುಳ್ಯ,ಪಿಟೀಲು ಅಭಿರಾಮ್ ಕೋಡಂಪಳ್ಳಿ ನಿರೂಪಣೆ ಪದ್ಮರಾಜ ಚಾರ್ವಾಕ ನಮ್ಮ ಹೆಮ್ಮೆಯ ಹಿಮ್ಮೇಳ ಕಲಾವಿದರು. ಸ್ವರಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೊಡಂದೂರು ನಿರ್ದೇಶನದಲ್ಲಿ ದಿನಪೂರ್ತಿ ಸಂಗೀತದ ರಸದೌತಣ ನೀಡಿದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page