
ಸ್ವಚ್ಛ ಕಾರ್ಕಳ ಬ್ರಿಗೇಡ್ ನ 5 ನೇ ವಾರ್ಷಿಕೋತ್ಸವದ ಪ್ರಯುಕ್ತ, ಉಡುಪಿ ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಾರ್ಕಳದ ಶ್ರೀಗುರು ರಾಘವೇಂದ್ರ ಮಠದಲ್ಲಿ ಜೂ 2 ರಂದು ನಡೆಯುವ, 5ನೇ ವರ್ಷದ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿ ಶುಭ ಕೋರಿದರು.
ತದನಂತರ ಗುರು ರಾಘವೇಂದ್ರ ಮಠದ ಆಡಳಿತಕ್ಕೊಳಪಟ್ಟ, ಸ್ವಚ್ಛ ಕಾರ್ಕಳ ಬ್ರಿಗೇಡ್ ನೆಟ್ಟು ಪೋಷಿಸಿದ ಫ್ರೀಡಂ ಟ್ರೀ ಪಾರ್ಕ್ ನ ಗುರುರಾಘವೇಂದ್ರ ವನ ಮತ್ತು ವಿಶ್ವೇಶತೀರ್ಥ ವನಕ್ಕೆ ಭೇಟಿಕೊಟ್ಟರು. ಪಾರ್ಕ್ನಲ್ಲಿ ನೆಟ್ಟ ಗಿಡಗಳನ್ನು ಪರಿಶೀಲಿಸಿ, ಸ್ವಚ್ಛ ಕಾರ್ಕಳ ಬ್ರಿಗೇಡ್ ಕಾರ್ಯಕರ್ತರ ಕಾರ್ಯವನ್ನು ಶ್ಲಾಘಿಸಿದರು.
ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರಾದ ಸುರೇಂದ್ರ ಕಾರ್ಕಳ ರವರು ತಾವು ಬಿಡಿಸಿದ ಅಪೂರ್ವವಾದ ರಾಮಕೃಷ್ಣರ ಚಿತ್ರವನ್ನು ಶ್ರೀಪಾದರಿಗೆ ನೆನಪಿನ ಕಾಣಿಕೆಯಾಗಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಹಿರಿಯ ಸದಸ್ಯರಾದ ಫೆಲಿಕ್ಸ್ ವಾಸ್ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

