31.4 C
Udupi
Sunday, March 15, 2026
spot_img
spot_img
HomeBlogಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ,

ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ,

ಕಾರ್ಕಳ ನಗರದ,ಸರ್ಕಾರಿ ಬಾವಿಗಳ ಸ್ವಚ್ಛತಾ ಕಾರ್ಯಕ್ರಮ

ಹಲವು ವರ್ಷಗಳಿಂದ ದಿನಬಳಕೆಯ ನೀರಿನ ಮೂಲಗಳಾದ ತೆರೆದ ಸರಕಾರಿ ಬಾವಿಗಳು ನಿರ್ವಹಣೆಯಿಲ್ಲದೇ ನಿಷ್ಪ್ರಯೋಜಕವಾಗಿವೆ. ತ್ಯಾಜ್ಯದ ಗುಂಡಿಗಳಂತಾಗಿ ಹೋಗಿವೆ.

ನಗರದ ಹಳೆಯ ಬಾವಿಯ ಸ್ವಚ್ಛ ಮಾಡಬೇಕು. ಬಾವಿಯ ಸುತ್ತಮುತ್ತ ಬೆಳೆದಿರುವ ಗಿಡಗಂಟಿ ತೆರವುಗೊಳಿಸಬೇಕು. ಬಾವಿಯ ನೀರಲ್ಲಿ ಬಿದ್ದಿರುವ ಕಸಕಡ್ಡಿ ಸ್ವಚ್ಛಗೊಳಿಸಬೇಕು. ನಗರದ ಜನರು ಮತ್ತೆ ಬಾವಿ ನೀರು ಉಪಯೋಗಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ನಿರ್ಧರಿಸಿದ ಸ್ವಚ್ಛ ಕಾರ್ಕಳ ಬ್ರಿಗೇಡ್, ಕಾರ್ಯಪ್ರವೃತ್ತರಾಗಿ ದಿನಾಂಕ 15 ಮಾರ್ಚ್ 2026 ರ ಭಾನುವಾರ ಬೆಳಗ್ಗೆ 6.30 ಯಿಂದ 8.30 ವರೆಗೆ, ಸಾಲ್ಮರದಲ್ಲಿರುವ ಸರಕಾರಿ ತೆರೆದ ಬಾವಿ ಹಾಗೂ ಅದರ ಸುತ್ತಮುತ್ತಲ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ದಶಕಗಳ ಹಿಂದೆ ತುಂಬಿದ್ದ ಕೆರೆಬಾವಿಗಳು ಇಂದು ಬರಡಾಗಿವೆ, ಕುಡಿಯುವ ನೀರು ಬಾವಿಯಿಂದ ಬಾಟಲಿಯಷ್ಟೇ ಉಳಿದಿದೆ. ಭವಿಷ್ಯಕ್ಕೆ, ಬಾಟಲಿಗೆ ತುಂಬಲೂ ನೀರು ಸಿಗಲಾರದಂತಾಗುವುದನ್ನು ತಡೆಯಲು ಇಂದೇ ನೀರು ಉಳಿಸಲು ಆರಂಭಿಸಿ.

ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಇಬ್ಬರು ಕಾರ್ಯಕರ್ತರು ಬಾವಿಗೆ ಇಳಿದು ಬಾವಿಯಲ್ಲಿ ತುಂಬಿದ್ದ ಕಸಕಡ್ಡಿಗಳನ್ನು, ಸಣ್ಣ ಪುಟ್ಟ ಗಿಡಗಂಟಿಗಳನ್ನು ಕಿತ್ತು ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ಸ್ವಚ್ಛ ಮಾಡಲಾಯಿತು.
ಉಳಿದ ಕಾರ್ಯಕರ್ತರೆಲ್ಲರೂ ಬಾವಿಯಲ್ಲೇ ಹೊರಗೆ ಸುತ್ತಮುತ್ತಲು ತುಂಬಿದ್ದ ಕಸಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ಸ್ವಚ್ಛ ಮಾಡಿ ಬಾವಿಯ ಹೊರಗಿನ ಗೋಡೆಗಳಿಗೆ ಹಳದಿ ಬಣ್ಣದ ಪೈಂಟ್ ಕೊಡಲಾಯಿತು.
ಸುಮಾರು 25 ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಕಳದ ಅಗ್ನಿಶಾಮಕ ಠಾಣೆಯವರು ಬಾವಿಗೆ ಇಳಿಯಲು ಸಹಕಾರಿಯಾಗಿ ಹಗ್ಗ ಕೊಟ್ಟು ಸಹಕರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page