
ಇಂದು ಸ್ವಚ್ಛ ಕಾರ್ಕಳ ಬ್ರಿಗೇಡ್ ಶ್ರಮದಾನದ ಮುಖಾಂತರ ತಮ್ಮ ತಂಡಕ್ಕೆ ಸದಾ ಬೆಂಬಲ, ಸಹಕಾರ ಮತ್ತು ಪ್ರೋತ್ಸಾಹ ನೀಡಿ ಹಲವಾರು ಬಾರಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ದಾನಶಾಲೆ ನಿವಾಸಿ ಮಹಾವೀರ್ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಇದೇ ಕಳೆದ ಫೆ. 16ರಂದು ಮಹಾವೀರ್ ಪ್ರಸಾದ್ ಅವರು ನಿಧನ ಹೊಂದಿರುತ್ತಾರೆ. ಅವರ ನೆನಪಿನಲ್ಲಿ ಈ ಭಾನುವಾರ ಧಾನಶಾಲೆಯಲ್ಲಿ ಸ್ವಚ್ಛ ಮಾರ್ಗಂ ಅಭಿಯಾನದ ಅಡಿಯಲ್ಲಿ ದಾನಶಾಲೆ ಮುಖ್ಯ ರಸ್ತೆ, ಗೋಮ್ಮಟ ಬೆಟ್ಟ ಪರಿಸರದಲ್ಲಿ ದಾನಶಾಲೆ ನಿವಾಸಿಗಳೊಂದಿಗೆ ಕೈ ಜೋಡಿಸಿ ಬೃಹತ್ ಸ್ವಚ್ಛತಾ ಕಾರ್ಯ ಮಾಡಲಾಯಿತು. ಪೈಪ್-ಲೈನ್ ಅಳವಡಿಕೆ ಕಾಮಗಾರಿಯಿಂದ ಆದ ಹೊಂಡಗಳನ್ನು ಮಣ್ಣು ಜಲ್ಲಿ ತುಂಬಿ ಮುಚ್ಚಲಾಯಿತು. ಸೇವಾ ಕಾರ್ಯಗಳನ್ನು ನೋಡಿ ಮಧ್ಯ ಪ್ರದೇಶದಿಂದ ಬಂದಿದ್ದ ಯಾತ್ರಿಗಳು ಸ್ವಚ್ಛ ಬ್ರಿಗೇಡ್ ತಂಡವನ್ನು ಶ್ಲಾಗಿಸಿದರು.
ಸ್ವಚ್ಛ ಮಾರ್ಗಂ ಅಭಿಯಂದಲ್ಲಿ ಸ್ಥಳೀಯರಾದ ನೇಮಿರಾಜ್ ಅರಿಗ, ಮೃತ ಮಹಾವೀರ್ ಪ್ರಸಾದ ಅವರ ಸಹೋದರ ಶ್ರೀಕಾಂತ್ ಜೈನ್, ಸಹೋದರಿ ಅರುಣಾ ಜೈನ್ ಮತ್ತು ಸ್ವಚ್ಛ ಬ್ರಿಗೇಡ್ ತಂಡದ ಹಾಗು ಸ್ಥಳೀಯರು ಭಾಗವಹಿಸಿದ್ದರು.






















































