ಶ್ರೀ ಭುವನೇಂದ್ರ ರೆಸಿಡೆನ್ಷಿಯಲ್ ಸ್ಕೂಲ್ ಕಾರ್ಕಳ, ರಾಷ್ಟ್ರೀಯ ವೈದ್ಯರ ದಿನಾಚರಣೆ

ಸ್ವಚ್ಛತೆಯೇ ಆರೋಗ್ಯದ ಗುಟ್ಟು. ಮಾನವನ ಜೀವನದಲ್ಲಿ ಆರೋಗ್ಯ ಒಂದಿದ್ದರೆ ಅದಕ್ಕಿಂತ ದೊಡ್ಡ ಭಾಗ್ಯ ಬೇರೆ ಯಾವುದು ಇಲ್ಲ. ನಾವೆಲ್ಲರೂ ಆರೋಗ್ಯವಂತರಾಗಿ ಬಾಳಿದರೆ ಅದೇ ನಮಗೆ ದೊಡ್ಡ ಸಂಪತ್ತು. ಆರೋಗ್ಯದಿಂದ ಮಾತ್ರ ನೆಮ್ಮದಿ ಸಾಧ್ಯ ಎಂದು ನಿಟ್ಟೆ ಗಜಾರಿಯ ಹಾಸ್ಪಿಟಲ್ ನ ಖ್ಯಾತ ವೈದ್ಯರಾದ ಡಾII ಕೃಷ್ಣಾನಂದ ಮಲ್ಯ ಇವರು ಹೇಳಿದರು.

ದಿನಾಂಕ 01.07.2025 ರಂದು ಶ್ರೀ ಭುವನೇಂದ್ರ ರೆಸಿಡೆನ್ಷಿಯಲ್ ಸ್ಕೂಲ್ ಕಾರ್ಕಳ ಇಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ನಡೆದ ಆರೋಗ್ಯ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ದೇಶ ಕಂಡ ಶ್ರೇಷ್ಠ ವೈದ್ಯ ಡಾII ಬಿ ಸಿ ರಾಯ್ ಇವರ ನೆನಪಿಗಾಗಿ ಪ್ರತಿ ವರ್ಷ ನಾವು ವೈದ್ಯರ ದಿನವನ್ನು ಆಚರಿಸುತ್ತೇವೆ. ಈ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಹಾಗೂ ವೈದ್ಯರ ಸೇವೆಯನ್ನು ಸ್ಮರಿಸುತ್ತೇವೆ. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ಶ್ರೀ ಕೆ ವೆಂಕಟೇಶ್ ಪ್ರಭು ಇವರು ಮಾತನಾಡಿ ವೈದ್ಯಕೀಯ ವೃತ್ತಿ ಎನ್ನುವುದು ಒಂದು ಸೇವೆ. ಒಂದು ಜೀವವನ್ನು ಉಳಿಸುವ ಕಾರ್ಯವನ್ನು ವೈದ್ಯರಾದವರು ಮಾಡುತ್ತಾರೆ. ವೈದ್ಯರೆಂದರೆ ದೇವರ ಸ್ವರೂಪ ಎಂದು ಹೇಳಿದರು.
ಸಂಸ್ಥೆಯ ಪೋಷಕ ಪ್ರತಿನಿಧಿ ಹಾಗೂ ಖ್ಯಾತ ವೈದ್ಯರಾದ ಡಾI ನಮಿತಾ ಕಾಮತ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಪ್ರಮೀಳಾ ಕೋಟ್ಯಾನ್ ಇವರು ಸ್ವಾಗತಿಸಿದರು. ವಿದ್ಯಾರ್ಥಿಯಾದ ಮಾಸ್ಟರ್ ಪ್ರದ್ಯೋತ್ ಇವರು ಇವರು ಕಾರ್ಯಕ್ರಮವನ್ನು ನಿರೂಪಿಸಿ, ಮಾಸ್ಟರ್ ಸಮರ್ಥ್ ನಾಡಿಗೆ ಇವರು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಹಾಗೂ ಸಂವಾದ ಕಾರ್ಯಗಾರ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಶಿಕ್ಷಕೇತರ ಬಂಧುಗಳು ಉಪಸ್ಥಿತರಿದ್ದರು.
