ಇತ್ತೀಚೆಗೆ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡಿ ‘ಕರ್ನಾಟಕವು ಶೀಘ್ರದಲ್ಲಿಯೇ ಮೊದಲ ಒಂದೇ ಭಾರತ ಸ್ಲೀಪರ್ ರೈಲನ್ನು ಪಡೆಯಲಿದೆ’ ಎಂದು ಹೇಳಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ 2025ರ ಜನವರಿಯಲ್ಲಿ ಈ ಮಾದರಿ ರೈಲುಗಳು ದೇಶದ ವಿವಿಧ ಮಾರ್ಗದಲ್ಲಿ ಸಂಚಾರ ನಡೆಸಲಿದ್ದು ಕರ್ನಾಟಕಕ್ಕೂ ಸಹ ವಂದೇ ಭಾರತ್ ಸ್ಲೀಪರ್ ರೈಲು ಘೋಷಣೆಯಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ವಿ ಸೋಮಣ್ಣ ಅವರು ಕಳೆದ ಸಪ್ಟೆಂಬರ್ ನಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಉತ್ಪಾದನಾ ಘಟಕದಲ್ಲಿ ತಯಾರಿಸಲಾದ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಅನಾವರಣಗೊಳಿಸಿದ್ದು ಈ ನೂತನ ರೈಲು ಗಂಟೆಗೆ 160 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಕಾರ್ಯಾಚರಣೆ ನಡೆಸಲಿದೆ.
ಈ ರೈಲು ಹದಿನಾರು ಕೋಚ್ ಗಳನ್ನು ಹೊಂದಿದ್ದು ರಾತ್ರಿಯ ವೇಳೆಯಲ್ಲಿ ಪ್ರಯಾಣಿಕರು ಆರಾಮದಾಯಕವಾಗಿ ನಿದ್ದೆ ಮಾಡಬಹುದಾಗಿದೆ. ಇದು ಪ್ರಯಾಣಿಕರಿಗೆ ವಿಮಾನದಂತಹ ಸೌಕರ್ಯವನ್ನು ಒದಗಿಸಲಿದ್ದು ಇದರಲ್ಲಿ ಐಷಾರಾಮಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಜಿಎಸ್ಆರ್ಪಿ ಪ್ಯಾನಲ್ಗಳು, ಸ್ಪೆಷಲ್ ಬರ್ತ್ ಗಳು, ಯುಎಸ್ ಬಿ ಚಾರ್ಜಿಂಗ್ ಸಾಕೆಟ್, ರೀಡಿಂಗ್ ಲೈಟ್ ಮತ್ತು ಬೃಹತ್ ಗಾತ್ರದ ಲಗೇಜ್ ರೂಂ ಮತ್ತು ಆಟೋಮ್ಯಾಟಿಕ್ ಡೋರ್ ಗಳು ಸೇರಿದಂತೆ ವಿವಿಧ ಸೌಕರ್ಯಗಳನ್ನು ಒದಗಿಸಲಿದೆ.