
ಹೊಸದಿಲ್ಲಿ: ಭಾರತೀಯ ಹವಾಮಾನ ಇಲಾಖೆಯು ಮಲೇಶಿಯಾ ಮತ್ತು ಮಲಕ್ಕಾ ಜಲಸಂಧಿಯ ಬಳಿ ವಾಯುಭಾರ ಕುಸಿತವಾಗಿದ್ದು ಪರಿಣಾಮ ಮುಂದಿನ 48 ಗಂಟೆಗಳಲ್ಲಿ ಇದು ‘ಸೆನ್ಯಾರ್’ ಚಂಡಮಾರುತವಾಗಿ ಪರಿವರ್ತನೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.
ದಕ್ಷಿಣ ಭಾರತಕ್ಕೆ ಹೊಂದಿಕೊಂಡಿರುವ ಪೂರ್ವ ಕರಾವಳಿಯಲ್ಲಿ 45-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ತಮಿಳುನಾಡು, ಕೇರಳ, ಲಕ್ಷದ್ವೀಪ, ಅಂಡಮಾನ್ ನಿಕೋಬಾರ್, ಕರ್ನಾಟಕ ಮತ್ತು ಆಂಧ್ರದಲ್ಲಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದ್ದು ಈ ಪೈಕಿ ತಮಿಳುನಾಡಿನಲ್ಲಿ ನ. 25ರಿಂದ 30ರವರೆಗೆ, ಕೇರಳದಲ್ಲಿ ನ. 24ರಂದು, ಅಂಡಮಾನ್ ನಲ್ಲಿ ನ. 25 ರಿಂದ 29 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.






















































