
ಕಾರ್ಕಳ:ಸೂರಾಲು ಗುಂಡಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು ರೂ. 40,000/-ಕ್ಕೂ ಅಧಿಕ ಮೌಲ್ಯದ ಉಚಿತ ಬರವಣಿಗೆ ಸಾಮಗ್ರಿ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವು ಸೂರಾಲು ಗ್ರಾಮ ಸೇವಾ ಟ್ರಸ್ಟ್ (ರಿ,)ಕಾರ್ಕಳ ಇವರ ಆಶ್ರಯದಲ್ಲಿ , ದಾನಿಗಳ ಸಹಕಾರದೊಂದಿಗೆ ಜೂ. 24ರಂದು ನಡೆಯಿತು,
ಟ್ರಸ್ಟ್ ನ ಅಧ್ಯಕ್ಷರಾದ ಉಮೇಶ್ ಪೂಜಾರಿ ಸೂರಾಲು ಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಿಯ್ಯಾರು ಗ್ರಾಮ ಪಂಚಾಯತ್ ಸದಸ್ಯರಾದ ಮೇಬಲ್ ಜಾಯ್ಸ್ ಡಿ’ಸಿಲ್ವ ಅವರು ದೀಪ ಬೆಳಗಿಸಿ ಉದ್ಘಾಟಿಸಿ,ಶಾಲಾ ಮಕ್ಕಳಿಗೆ ಮಂಗಳೂರು ಎಂ. ಸಿ.ಸಿ.ಬ್ಯಾಂಕ್ ಉಪಾಧ್ಯಕ್ಷರಾದ ಜೆರಾಲ್ಡ್ ಡಿ’ಸಿಲ್ವ ಮಿಯ್ಯಾರು ಇವರು ಕೊಡಮಾಡಿದ ಉಚಿತ ಬರವಣಿಗೆ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ ದಾನಿಗಳು ಕೊಡುಗೆಯಾಗಿ ನೀಡಿದ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಮೂಲಕ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಆಸರೆಯಾಗಿ ಬೆಶೆಯಬೇಕು ಎಂದರು
,ಕಾರ್ಕಳ ಆಟೋ ಚಾಲಕ ಮಾಲಕರ ಸಂಘದಿಂದ ಕೊಡಮಾಡಲ್ಪಟ್ಟ ಸಮವಸ್ತ್ರವನ್ನು ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಉಡುಪಿ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಸಂತೋಷ್ ರಾವ್ ಅವರು ವಿತರಿಸಿ ಸರಕಾರಿ ಶಾಲೆಗೆ ದಾನಿಗಳು ಬಹಳಷ್ಟು ಕೊಡುಗೆಗಳನ್ನು ನೀಡುವ ಮೂಲಕ, ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಡ ಮಕ್ಕಳಿಗೆ ಉತ್ಕೃಷ್ಟ ಮಟ್ಟದ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗುತ್ತಿದ್ದು, ಮೊಬೈಲ್ ಬಳಕೆಯಿಂದಾಗಿ ಸಣ್ಣ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದು ,ಹಲವಾರು ಅವಾಂತರಗಳಿಗೂ ಕಾರಣವಾಗುತ್ತಿದೆ, ಈ ಬಗ್ಗೆ ಮಕ್ಕಳ ಪೋಷಕರು ಗಮನಹರಿಸಿ, ಮಕ್ಕಳನ್ನು ಮೊಬೈಲಿನಿಂದ ಮುಕ್ತಗೊಳಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮುತುವರ್ಜಿ ವಹಿಸಬೇಕು ಎಂದರು,
ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಕಾರ್ಕಳ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯರಾದ ತಾರನಾಥ್ ಕೋಟ್ಯಾವ್ ಸೂರಾಲು ಅವರು ಮಾತನಾಡಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರದ ಅನುದಾನದ ಜೊತೆ ಜೊತೆಗೆ ದಾನಿಗಳ ಸಹಕಾರ ಅತ್ಯಗತ್ಯವಾಗಿದ್ದು ನಮ್ಮೂರಿನ ಶಾಲೆಗೆ ಕೊಡುಗೆಗಳನ್ನು ನೀಡಿದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ ಅವರು, ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಉದ್ಯೋಗಸ್ಥರಾದ ನಂತರ ತಾವು ಕಲಿತ ಶಾಲೆಯನ್ನು ಮರೆಯದೆ ತಮ್ಮಿಂದಾದ ಕೊಡುಗೆಯನ್ನು ಶಾಲೆಗೆ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕಾಗಿ ವಿನಂತಿಸಿದರು
, ,ಕೆರ್ವಾಶೆ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಪೂಜಾರಿ ಕೆರ್ವಾಶೆ ಮಾತನಾಡಿ ಮಕ್ಕಳನ್ನು ಕೇವಲ ಪ್ರೀತಿ ಮಾಡಿ ಬೆಳೆಸುವುದಲ್ಲದೆ , ತಂದೆ ತಾಯಿಯ ಕಷ್ಟಗಳನ್ನು ಅರಿತು ಬೆಳೆಸುವುದು ಪೋಷಕರ ಕರ್ತವ್ಯವಾಗಿದೆ ಎಂದು ಶುಭಹಾರೈಸಿದರು,
, ಸೂರಾಲು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸುಧಾಕರ್ ಎಂ ಶೆಟ್ಟಿ ಆಟೋ ಚಾಲಕ ಮಾಲಕರ ಸಂಘ ಕಾರ್ಕಳ ಇದರ ಸಂಘಟನಾ ಕಾರ್ಯದರ್ಶಿ ಶಿವಾನಂದ ಪೂಜಾರಿ,ಶಾಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಉಮೇಶ್ ಕುಲಾಲ್,ಜೆ ಸಿ ಐ ಕಾರ್ಕಳ ರೂರಲ್ ನ ಪೂರ್ವ ಅಧ್ಯಕ್ಷರಾದ ಮಂಜುನಾಥ್ ಕೋಟ್ಯಾನ್, ಶಾಲಾ ಮುಖ್ಯೋಪಾಧ್ಯಾಯರಾದ ಜಬೀನ.ಇ.ವೇದಿಕೆಯಲ್ಲಿ ಉಪಸ್ಥಿತರಿದ್ದರು,
ಕಾರ್ಯಕ್ರಮದಲ್ಲಿ ,ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ಟೀಮ್ ಮಂಗಳೂರು ಕೊಡ ಮಾಡಿದ 45 ಛತ್ರಿಗಳು,ಮಾಧವ ಪ್ರಕಾಶ್ ಕ್ಯಾಶೂಶ್ ಮಾಲಕರಾದ ದೀಪಾ ನಾಯಕ್ ಕೆಾಡಮಾಡಿದ ಪ್ರೆಸ್ಟೀಜ್ ಕುಕ್ಕರ್, ನಲಿ ಕಲಿ ಮಕ್ಕಳಿಗೆ ಸ್ವರ್ಣ ಸೌಹಾರ್ದ ಸಹಕಾರಿ ನಿಯಮಿತ ಜೋಡುಕಟ್ಟೆ ಇದರ ಅಧ್ಯಕ್ಷರಾದ ಶೇಕ್ ಶಬ್ಬೀರ್ ಕೂಡ ಮಾಡಿದ ಪ್ಲಾಸ್ಟಿಕ್ ಕುರ್ಚಿ, , ಶಾಲಾ ಮಕ್ಕಳಿಗೆ ಸರಕಾರದಿಂದ ನೀಡಿದ ಸಮವಸ್ತ್ರಗಳು ಹಾಗೂ ವಿದ್ಯಾರ್ಥಿಗಳಿಗೆ ನಡೆಸಿದ ಪರಿಸರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ನಡೆಸಲಾಯಿತು,ಶಾಲಾ ಮುಖ್ಯ ಶಿಕ್ಷಕಿ ಜಬೀನ.ಇ ದಾನಿಗಳಿಗೆ ಹೃದಯಾಂತರಾಳದ ವಂದನೆಗಳನ್ನು ಸಲ್ಲಿಸಿ ಸ್ಮರಣಿಕೆ ಮತ್ತು ಕೃತಜ್ಞತಾ ಪತ್ರವನ್ನು ನೀಡಿ ಗೌರವಿಸಿದರು, ಈ ಸಂದರ್ಭದಲ್ಲಿ,ಆರೋಗ್ಯ ಕೇಂದ್ರದ ಶ್ಯಾಮಲ,ಕಲಾವಿದ ಹಮೀದ್ ಮಿಯ್ಯಾರು, ಅಂಗನವಾಡಿ ಕಾರ್ಯಕರ್ತೆ ಪ್ರತಿಮ, ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಸುನೀತಾ ಸತೀಶ್, ಊರಿನ ಪ್ರಮುಖರಾದ ಪ್ರವೀಶ್.ಎಚ್. ರಾವ್,ಸುರೇಶ್ ಕುಲಾಲ್, ಅಣ್ಣಿ ಮಡಿವಾಳ,ಸುರೇಶ್ ಬಂಗೇರ,,ಅಜೀಮ್,ರಿತೇಶ್ ಕೋಟ್ಯಾನ್, ಪ್ರಣಾಮ್ ಕೋಟ್ಯಾನ್ , ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಗೀತಾ ಅವರು ನಿರೂಪಿಸಿದರು, ವಿದ್ಯಾಶ್ರೀ ಸ್ವಾಗತಿಸಿ ಸ್ವಾತಿ ವಂದನಾರ್ಪಣೆಗೈರು