
‘ ಸು ಪ್ರಮ್ ಸೋ’ ಸಿನಿಮಾಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಇದೀಗ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಕೂಡ ಈ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡದಿಂದ ಆರಂಭವಾದ ಈ ಚಿತ್ರದ ವಿಜಯದ ಓಟವು ಮಲಯಾಳಂ ಮತ್ತು ತೆಲುಗುವಿನಲ್ಲೂ ಭಾರಿ ಮೆಚ್ಚುಗೆ ಪಡೆದಿದ್ದು ಇದೀಗ ಬಾಲಿವುಡ್ ವರೆಗೂ ತಲುಪಿದೆ. ಅಜಯ್ ದೇವಗನ್ ಸಿನಿಮಾ ತಂಡವನ್ನು ಮನೆಗೆ ಆಹ್ವಾನಿಸಿ ಚರ್ಚಿಸಿದ್ದು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಜೆಪಿ “ಅಜಯ್ ದೇವಗನ್ ಸಿನಿಮಾ ನೋಡಿ ಮೆಚ್ಚಿಕೊಂಡು ಮನೆಗೆ ಕರೆಸಿ ಸಿನಿಮಾ ಬಗ್ಗೆ ಚರ್ಚಿಸಿದರು. ಅವರದು ಅದ್ಭುತ ವ್ಯಕ್ತಿತ್ವ” ಎಂದು ಹೇಳಿದ್ದಾರೆ. ಈ ಸಿನಿಮಾದ ಹಿಂದಿ ರಿಮೇಕ್ ರೈಟ್ಸ್ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.