
ಸುರತ್ಕಲ್: ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು ,ಜನಜೀವನ ಅಸ್ತವ್ಯಸ್ತಗೊಂಡಿದೆ.
ಸುರತ್ಕಲ್ ಸಮೀಪದ ಜೋಕಟ್ಟೆ ಬಳಿ ಗುರುವಾರ ಸುರಿದ ಭಾರಿ ಮಳೆಗೆ ಮನೆಯೊಂದರ ತಡೆಗೋಡೆ ಕುಸಿದ ಪರಿಣಾಮ, ಬಾಲಕನೊಬ್ಬ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ವರದಿಯಾಗಿದೆ. ಮೃತಪಟ್ಟ ಬಾಲಕನನ್ನು ಶೈಲೇಶ್ (17) ಎಂದು ಗುರುತಿಸಲಾಗಿದ್ದು, ಮನೆಯೊಳಗಿದ್ದ ಬಾಕಿ ನಾಲ್ವರು ಸದಸ್ಯರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.








