29.1 C
Udupi
Sunday, June 1, 2025
spot_img
spot_img
HomeBlogಸಿಬಿಎಸ್ಇ 10ನೇ ತರಗತಿ ಫಲಿತಾಂಶ,

ಸಿಬಿಎಸ್ಇ 10ನೇ ತರಗತಿ ಫಲಿತಾಂಶ,

ಕಾರ್ಕಳ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಸ್ಕೂಲ್ ಸತತ 21ನೇ ಬಾರಿ ಶೇ. 100 ಫಲಿತಾಂಶ

ಕಾರ್ಕಳ: ಸಿ.ಬಿ.ಎಸ್‌.ಇ ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಸ್ಕೂಲ್ ಸತತ 21ನೇ ಬಾರಿ 100% ಫಲಿತಾಂಶವನ್ನು ಪಡೆದುಕೊಂಡಿದೆ.

ಪರೀಕ್ಷೆಗೆ ಹಾಜರಾದ 73 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಶಾಲಾ ವಿದ್ಯಾರ್ಥಿ ನಾಯಕನಾದ ಅನನ್ ರವೀಂದ್ರ 96.20% ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿ ಆಗಿರುತ್ತಾನೆ. ಪ್ರಣಮ್ಯ 93.40% ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಅಭಿಜ್ಞಾ 93.20% ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಉಳಿದಂತೆ ಜೈ ಆದಿತ್ಯ ಹಾಗೂ ಸಾನ್ವಿ ಶೆಣೈ 92.20%, ತನಯ್ ಎಂ ರಾವ್ ಹಾಗೂ ತೇಜಸ್ ಬಿರಾದರ್ 91.80%, ಮೋಹಿತ್ 91.40%, ಆಯುಷ್ ರಾಜೇಶ್ 90.80%, ಸಮರ್ಥ್ ಎಮ್ ಪಿ 89.40%, ಕುಶಾಲ್ ಗೌಡ 88.60%, ಪ್ರಣಮ್ ಕೋಟ್ಯಾನ್ 88%, ವೇದಿಕ್ ಕೆಎಸ್ 87.40%, ನೀರಜ್ ಪಟೇಲ್ 86.40% ಅಂಕ ಪಡೆದಿರುತ್ತಾರೆ. ಸಂಸ್ಥೆಯಲ್ಲಿ ನಡೆಯುವ ವಿಶೇಷ ತರಗತಿ, ಶಿಕ್ಷಕರ ಪರಿಶ್ರಮ ಹಾಗೂ ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ಸಂಸ್ಥೆಗೆ ಉತ್ತಮ ಫಲಿತಾಂಶ ಬಂದಿರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಶಿಕ್ಷಕ ವೃಂದ ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page