
ವಿಜಯಪುರ: ಬಿಜೆಪಿ ಹಿರಿಯ ನಾಯಕ, ಹಾಲಿ ಸಂಸದ ರಮೇಶ ಜಿಗಜಿಣಗಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಹಾಸ್ಯಭರಿತ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ತಮ್ಮ ಹಳೆಯ ಸ್ನೇಹವನ್ನು ಸ್ಮರಿಸಿದ ಅವರು, ಮೊದಲಿನಿಂದಲೂ ಆತ್ಮೀಯರಾಗಿದ್ದ ಸಿದ್ದರಾಮಯ್ಯ ಅವರು ನಂತರ ಬದಲಾಗಿದ್ದಾರೆ ಎಂದು ಹೇಳಿದ್ದಾರೆ.
ಸಿದ್ರಾಮಣ್ಣ ಮೊದಲಿನಿಂದಲೂ ನನಗೆ ಬಾಳ ಆತ್ಮೀಯ. ಭಯಂಕರ ಚೊಲೋ ಇದ್ದರು. ನಾ ಮಂತ್ರಿ ಆಗಿದ್ದಾಗ ಅವರು ಏನೂ ಇರಲಿಲ್ಲ. ನಮ್ಮ ಜೊತೆಗೆ ಇದ್ದಾಗ ಬಹಳ ಒಳ್ಳೆಯವ ಇದ್ದರು. ಯಾವತ್ತು ಕಾಂಗ್ರೆಸ್‌ಗೆ ಹೋದ್ರೋ ಆವಾಗಿನಿಂದ ಭಯಂಕರವಾಗಿ ಕೆಟ್ಟು ಬಿಟ್ರು ಎಂದು ತಮಾಷೆಯಾಗಿ ಹೇಳಿದ್ದಾರೆ.
ಕೊನೆಯಲ್ಲಿ ಮಾತನಾಡುವಾಗ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾದರೂ ಆಗಲಿ, ನಮಗೆ ಕೇಂದ್ರದಲ್ಲಿ ಮೋದಿ ಪ್ರಧಾನಮಂತ್ರಿ ಆಗಿರಬೇಕು ಎಂದು ಸ್ಪಷ್ಟನೆ ನೀಡಿದರು.



















