
ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಈ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನೇ ಮರೆತಿದೆ. ಸಿಎಂ ಬಿಹಾರ ಚುನಾವಣಗೆ ಫಂಡಿಂಗ್ ಮಾಡಲು ಬ್ಯುಸಿ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರಿನ ಅಭಿವೃದ್ಧಿಗೆ ಮಾಡಿರುವ ಒಂದೇ ಒಂದು ಪ್ರಾಜೆಕ್ಟ್ ತೋರಿಸಿ ಎಂದು ಸವಾಲೆಸೆದಿದ್ದಾರೆ.
ರಾಜ್ಯದಲ್ಲಿ 2300 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾರಿಗೆ ನೌಕರರು ಸಂಬಳ ಇಲ್ಲದೆ ಪ್ರತಿಭಟನೆ ಮಾಡ್ತಿದ್ದಾರೆ. ಹಿಂದಿನ ಸರ್ಕಾರದ ಫ್ಲೈಓವರ್ ಪ್ರಾಜೆಕ್ಟ್ ಇಂದಿಗೂ ಮುಗಿದಿಲ್ಲ. ಶಿಕ್ಷಕರ ನೇಮಕಾತಿ ಅಂತೂ ಆಗ್ತಿಲ್ಲ. ವರ್ಗಾವಣೆ ದಂಧೆ ಮಾತ್ರ ಎಗ್ಗಿಲ್ಲದೆ ನಡೆತಿದೆ. ಬೆಂಗಳೂರಿನಲ್ಲಿ ಸೈಟ್‌ಗೆ ರೇಟ್ ಚಾರ್ಟ್ ಆಗ್ತಿದೆ. ರಾಜ್ಯದ ಅಭಿವೃದ್ಧಿಯನ್ನೇ ಈ ಸರ್ಕಾರ ಮರೆತುಬಿಟ್ಟಿದೆ. ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಲು ಬ್ಯುಸಿ ಆಗಿದ್ದೀರಿ ನೀವು ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರಿಗೆ ಒಂದೇ ಒಂದು ಪ್ರಾಜೆಕ್ಟ್ ತೋರಿಸಿ. ರೆವೆನ್ಯು ಸರ್‌ಪ್ಲಸ್ ಬಜೆಟ್ ಕೊಟ್ಟಿದ್ದು ಬಿಜೆಪಿ. ಈಗ ನೀವು ಗುತ್ತಿಗೆದಾರರಿಗೆ ಹಣವನ್ನೇ ಕೊಡ್ತಿಲ್ಲ. ಹಣ ಕೇಳಿದರೆ ಗುತ್ತಿಗೆದಾರರಿಗೆ ಬೆದರಿಕೆ ಹಾಕ್ತಿದೆ ನಿಮ್ಮ ಸರ್ಕಾರ. ನಿಮ್ಮ ಶಾಸಕರೇ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಬೆಂಗಳೂರಿಗೆ ಮಾಡಿದ ಒಂದೇ ಒಂದು ಪ್ರಾಜೆಕ್ಟ್ ತೋರಿಸಿ ಎಂದು ಸವಾಲು ಹಾಕಿದರು.



















































