
ಸಾರ್ವಜನಿಕ ಶನಿ ಪೂಜಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷದ್ ಬಜರಂಗದಳ ವೀರಮಾರುತಿ ಶಾಖೆ ಕರಿಯಕಲ್ಲು ಕಾರ್ಕಳ ವತಿಯಿಂದ ಪಿ ಯು ಸಿ ಪರೀಕ್ಷಾ ಫಲಿತಾಂಶ ದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕರಿಯಕಲ್ಲಿನ ವಿದ್ಯಾರ್ಥಿಗಳನ್ನು ಶ್ರೀ ಶನಿಶ್ವರ ಕ್ಷೇತ್ರ ಇಲ್ಲಿ ಅಭಿನಂದಿಸಲಾಯಿತು.

ವಿಜ್ಞಾನ ವಿಭಾಗದಲ್ಲಿ ಜ್ಞಾನಸುಧಾ ಕಾಲೇಜ್ ನ ರಾಜ್ಯಕ್ಕೆ 3 ನೇ ರ‍್ಯಾಂಕ್ ಗಳಿಸಿದ ದಿವಾಕರ್ ಪ್ರೀತಿ ಶೆಟ್ಟಿ ದಂಪತಿಗಳ ಪುತ್ರಿ ಶರಧಿ ಶೆಟ್ಟಿ ನಲ್ಲೂರು, ಭುವನೇಂದ್ರ ಕಾಲೇಜ್ ನ ವಾಣಿಜ್ಯ ವಿಭಾಗ ದಲ್ಲಿ ರಾಜ್ಯಕ್ಕೆ 5 ನೇ ರ‍್ಯಾಂಕ್ ಗಳಿಸಿದ ಗುರುಪ್ರಸಾದ್ ಪ್ರಭು ರಾಜೇಶ್ವರಿ ದಂಪತಿಗಳ ಪುತ್ರ ಆದಿತ್ಯ ಪ್ರಭು,ಮತ್ತುಶ್ರೀ ಭುವನೇಂದ್ರ ಕಾಲೇಜು ನ ವಾಣಿಜ್ಯ ವಿಭಾಗದಲ್ಲಿ ಶೇಕಡಾ 91 ಅಂಕಗಳನ್ನು ಗಳಿಸಿದ ರಾಜೇಂದ್ರ ಸುಖಲತ ದಂಪತಿಗಳ ಪುತ್ರಿ ಅನನ್ಯ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಸಾರ್ವಜನಿಕ ಶನಿ ಪೂಜಾ ಸಮಿತಿಯ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಪ್ರಮುಖ ರಾದ ಸುನಿಲ್ ಕೆ ಆರ್, ರವೀಂದ್ರ ಶಾಂತಿ, ವಿಶ್ವ ಹಿಂದೂ ಪರಿಷತ್ತಿ ನ ಮನೋಜ್, ಬಜರಂಗದಳದ ಸಂಪತ್, ಪ್ರತೀಕ್ ಕರಿಯಕಲ್ಲು, ಸಾರ್ವಜನಿಕ ಶನಿ ಪೂಜಾ ಸಮಿತಿಯ ಪ್ರಮುಖರಾದ ಸುಧೀರ್, ಪ್ರವೀಣ್, ಸುಕೇಶ್, ಜನಾರ್ಧನ್ ಮೊದಲಾದವರು ಉಪಸ್ಥಿತರಿದ್ದರು








