ಸಾಣೂರು ಬಂಟರ ಯಾನೆ ನಾಡವರ ಸಂಘದ, ದಶಮಾನೋತ್ಸವ ಸಂಭ್ರಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ

ಕಾರ್ಕಳ,.: ಸಾಧಕರಿಗೆ ಗೌರವ, ಪ್ರೋತ್ಸಾಹ, ಬಡ ಜನರಿಗೆ ಸಹಾಯದ ಮೂಲಕ ಪರಸ್ಪರ ಸಹಕಾರದ ಜೊತೆಗೆ ಸಮಾಜವು ಒಂದಾದಲ್ಲಿ ಎಲ್ಲರಿಗೂ ಶ್ರೇಯಸ್ಸು ಸಾಧ್ಯ ಎಂದು ತುಳು ಕೂಟ ಗೋವ ಇದರ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಸಾಣೂರು ಹೇಳಿದರು. ಸಾಣೂರು ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಾಣೂರಿನ ಶಿವರಾಮ ರೈ ಕಲಾವೇದಿಕೆಯಲ್ಲಿ ನಡೆದ ದಶಮಾನೋತ್ಸವ ಸಂಭ್ರಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಪ್ರಯುಕ್ತ ಜರುಗಿದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಂಟ ಸಮುದಾಯದವರು ಎಲ್ಲ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಮಾಡುತ್ತಿದ್ದಾರೆ. ಸಾಣೂರು ಬಂಟರ ಸಂಘ ಕಳೆದ ಹಲವು ವರ್ಷಗಳಿಂದ ತಮ್ಮ ಸಂಘಟನೆಯನ್ನು ಬಲಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು, ಸಾಧಕರಿಗೆ ಅಭಿನಂದಿಸುವ ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮ ಆಯೋಜಿಸುವುದು ಶ್ಲಾಘನೀಯ ಎಂದರು.
ರಾಜ್ಯ ಕೃಷರ್ ಮಾಲಕರ ಸಂಘದ ಅಧ್ಯಕ್ಷ ಡಾ| ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಬಂಟ ಸಮುದಾಯದ ಜನತೆಗೆ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸವು ಎಲ್ಲೆಡೆ ನಡೆಯುತ್ತಿರುವುದು ಶ್ಲಾಘನೀಯ. ಬಂಟರು ಇತರ ಸಮುದಾಯದ ಶ್ರೇಯಸ್ಸು ಮತ್ತು ಅಭಿವೃದ್ಧಿಗೂ ಒತ್ತು ನೀಡುತ್ತಾರೆ. ಸಾಣೂರು ಬಂಟರ ಸಂಘದ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಣೂರು ಬಂಟರ ಸಂಘದ ಅಧ್ಯಕ್ಷ ವಿಶ್ವನಾಥ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಬಂಟರ ಸಂಘದ ಮಾಜಿ ಸಂಚಾಲಕ ಸುನಿಲ್‌ಕುಮಾರ್ ಶೆಟ್ಟಿ, ಕಾರ್ಕಳ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಪೂರ್ಣಿಮಾ ಎನ್. ಹೆಗ್ಡೆ ಕುಂಟಾಡಿ, ಕಾರ್ಕಳ ಯುವ ಬಂಟರ ಸಂಘದ ಅಧ್ಯಕ್ಷ ಅವಿನಾಶ್ ಶೆಟ್ಟಿ, ಬಂಟರ ಸಂಘ ಕಾರ್ಕಳ-ಹೆಬ್ರಿ ಸಂಚಾಲಕ ವಿಜಯ ಶೆಟ್ಟಿ, ಪ್ರಮುಖರಾದ ಸಾಣೂರು ಗುತ್ತು ಪ್ರಭಾತ್ ನಾಯ್ಕ್ ಸಾಣೂರು ಗುತ್ತು ಮಾಲಿನಿ ರೈ, ಶ್ರೀಮತಿ ಶ್ರೀಮತಿ ಎಸ್. ರೈ, ಶ್ರೀಮತಿ ಹರ್ಷ ಪ್ರಮೋದ್ ಶೆಟ್ಟಿ, ಶುಭಕರ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಉಪಸ್ಥಿತರಿದ್ದರು.
ಬ್ಯಾಡ್ಮಿಂಟನ್ ಚಾಂಪಿಯನ್ ಆಯುಷ್ ಆರ್. ಶೆಟ್ಟಿ ಅವರ ಅವರ ತಾಯಿ ಶಾಲ್ಮಿಲಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಪಿಯುಸಿ, ಎಸ್‌ಎಸ್‌ಎಲ್‌ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸಮ್ಮಾನಿಸಲಾಯಿತು.
ಪ್ರ. ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಓಂಕಾರ್ ವಂದಿಸಿದರು ಜೊತೆ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿ ವರದಿ ಮಂಡಿಸಿದರು ಪ್ರಸಾದ್ ಶೆಟ್ಟಿ ಸಮ್ಮಾನಿತರ ಪಟ್ಟಿ ವಾಚಿಸಿದರು. ಜೊತೆ ಕಾರ್ಯದರ್ಶಿ ಮೋಹನ್ ಶೆಟ್ಟಿ ಸಾಣೂರು ಸ್ವಾಗತಿಸಿ, ನಿರೂಪಿಸಿದರು. ಸಭಾ ಕಾರ್ಯಕ್ರಮ ನಂತರ ಬೈಲೂರು ಚೈತನ್ಯ ಕಲಾವಿದರು ವತಿಯಿಂದ ಅಷ್ಟಮಿ ನಾಟಕ ಪ್ರದರ್ಶನಗೊಂಡಿತು.