
ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಗೊಮಟೇಶ್ವರ ಬೆಟ್ಟದಲ್ಲಿನ ಗೊಮಟೇಶ್ವರನನ್ನು ಉಲ್ಲೇಖಿಸಿ ಫೇಸ್ಬುಕ್ ನಲ್ಲಿ, ಅವಹೇಳನಕಾರಿ ಪೋಸ್ಟ್ ಮಾಡಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಸಾದ್ ಪೂಜಾರಿ ಎಂಬತನ ವಿರುದ್ಧ ನಿರಂಜನ್ ಜೈನ್ ಕಾರ್ಕಳ ದೂರು ದಾಖಲಿಸಿದ್ದು, ಅಕ್ಟೋಬರ್ 24ರಂದು ಪ್ರಸಾದ್ ಪೂಜಾರಿ ಫೇಸ್ಬುಕ್ ನಲ್ಲಿ ಇನ್ನೊಂದು ಸಾರಿ ಬಿಜೆಪಿ ಬಂದಿದ್ದರೆ ಕರ್ನಾಟಕದಲ್ಲಿ, ಎಂದು ಬರೆಯುತ್ತಾ ಕಾರ್ಕಳ ಗೊಮಟೇಶ್ವರನನ್ನು ಉಲ್ಲೇಖಿಸಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಇದು ಜೈನ ಧರ್ಮದ ಭಾವನೆಗೆ ಧಕ್ಕೆ ಉಂಟುಮಾಡುವ ಉದ್ದೇಶ ಹಾಗೂ ಬೇರೆ ಧರ್ಮದವರೊಂದಿಗೆ ವೈಮನಸ್ಸು ಉಂಟುಮಾಡುವ ಉದ್ದೇಶವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.



















































