
ಕಾರ್ಕಳ: ದಿನಾಂಕ 28/07/2025 ರಂದು ಸರಕಾರಿ ಪದವಿಪೂರ್ವ ಕಾಲೇಜು, ಸಾಣೂರು ಇಲ್ಲಿನ ವಿದ್ಯಾರ್ಥಿಗಳಿಗೆ ಕಾಲೇಜಿನ ‘ಸ್ಟ್ಯಾಂಡರ್ಡ್ಸ್ ಕ್ಲಬ್’ ನ ವತಿಯಿಂದ ಒರಿಯಂಟೇಶನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸ್ಟ್ಯಾಂಡರ್ಡ್ ಕ್ಲಬ್ ನ ನಾಯಕನಾದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಮಿತ್ ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಚೇತ ಕಾಮತ್ ಅವರು ವಹಿಸಿದ್ದರು. ದ್ವಿತೀಯ ಪಿಯುಸಿಯ ಕುಮಾರಿ ಸುಧೀಕ್ಷಾ ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಸ್ಟ್ಯಾಂಡರ್ಡ್ಸ್ ಕ್ಲಬ್ ನ ಮಾರ್ಗದರ್ಶಕರಾದ ರಸಾಯನಶಾಸ್ತ್ರ ಉಪನ್ಯಾಸಕರೂ ಆದ ಶ್ರೀ ನರೇಶ್ ಆಚಾರ್ಯ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಶ್ರೀ ಶ್ರೀಕರ್, ಬಿ ಟೆಕ್, ಎಂಬಿಎ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಾವು ದಿನನಿತ್ಯ ಬಳಸುವ ಮಾರುಕಟ್ಟೆಯಿಂದ ಖರೀದಿಸುವ ವಸ್ತುಗಳು ISI ಗುರುತನ್ನು ಹೊಂದಿರುವ ಬಗ್ಗೆ ಹಾಗೂ BIS ನ ಮಾನದಂಡಗಳನ್ನು ಪೂರೈಸಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳುವುದು ಎಷ್ಟು ಅಗತ್ಯ ಎನ್ನುವುದನ್ನು ಮನವರಿಕೆ ಮಾಡಿದರು. ಗುಣಮಟ್ಟ ಎಂದರೇನು? ಗುಣಮಟ್ಟವನ್ನು ನಿರ್ಧರಿಸುವವರು ಯಾರು? ಇಂತಹ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾ ಬಂಗಾರವನ್ನು ಖರೀದಿಸುವಾಗ ಹಾಲ್ ಮಾರ್ಕ್ ( hallmark) ಇರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು ಹಾಗೂ ಅದರ ಶುದ್ಧತೆಯನ್ನು (purity) ಅರಿಯುವ ಅಗತ್ಯತೆ ಗ್ರಾಹಕರಾದ ನಮಗೆ ತಿಳಿದಿರಬೇಕು ಎಂಬ ಮಾಹಿತಿಯನ್ನು ನೀಡಿದರು. ಮಾರುಕಟ್ಟೆಯಲ್ಲಿ ಸಿಗುವ ಇಲೆಕ್ಟ್ರಾನಿಕ್ ಉಪಕರಣಗಳ ತಯಾರಿಗೆ BIS ಬರೆದಿರುವ ಮತ್ತು ಉತ್ಪಾದಕರು ಅನುಸರಿಸಬೇಕಾದ ಸ್ಟ್ಯಾಂಡರ್ಡ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ದ್ವಿತೀಯ ಪಿಯುಸಿಯ ತ್ರಿಶಾ ಅವರು ವಂದಿಸಿದರು. ಈ ಕಾರ್ಯಕ್ರಮದ ಪೂರ್ವದಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಧ್ಯಾನ ಮಾಡುವುದನ್ನು ತಿಳಿಸಿಕೊಟ್ಟರು. ಒತ್ತಡಗಳಿಂದ ಹೊರಬರಲು ನಮಗೆ ಧ್ಯಾನ ಹೇಗೆ ಸಹಾಯ ಮಾಡುತ್ತದೆ ಎನ್ನುವುದನ್ನು ವಿವರಿಸಿದರು.