
ಪೋಲೀಸ್ ಇಲಾಖೆ ಕಾರ್ಕಳ ನಗರ ಠಾಣೆ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಸಾಣೂರು ಇಲ್ಲಿನ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ, ಪೋಕ್ಸೋ, ಮಾದಕ ದ್ರವ್ಯಗಳು ಹಾಗೂ ಅಪ್ರಾಪ್ತರ ವಾಹನ ಚಾಲನೆಯ ಕುರಿತು ಮಾಹಿತಿ ಕಾರ್ಯಕ್ರಮ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜು 11 ರಂದು ನಡೆಯಿತು.
ಕಾರ್ಕಳ ನಗರ ಪೊಲೀಸ್ ಠಾಣೆಯ ಪಿ .ಎಸ್ .ಐ. ಸುಬ್ರಹ್ಮಣ್ಯ ಎಸ್ ಇವರು ಪ್ರಸ್ತುತ ನಡೆಯುತ್ತಿರುವ ಸೈಬರ್ ಕ್ರೈಂ,ಮಾದಕ ದ್ರವ್ಯ ಜಾಲ, ಪೋಕ್ಸೋ ಘಟನೆಗಳು, ಅಪ್ರಾಪ್ತರ ವಾಹನ ಚಾಲನೆ ಈ ಎಲ್ಲ ವಿಷಯಗಳ ಬಗ್ಗೆ ಯಾವ ರೀತಿಯ ಎಚ್ಚರಿಕೆಯನ್ನು ವಹಿಸಬೇಕು ಎಂಬ ಮಾಹಿತಿಯನ್ನು ನೀಡುತ್ತಾ, ಜಾಗೃತಿ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ವೇದಿಕೆಯಲ್ಲಿ ಆಂಗ್ಲಬಾಷಾ ಉಪನ್ಯಾಸಕಿ ಡಾ.ಸುಮತಿ ಪಿ, ಹೈಸ್ಕೂಲು ವಿಭಾಗದ ಹಿರಿಯ ಶಿಕ್ಷಕಿ ವೃಂದಾ, ಪೋಲೀಸ್ ಸಂತೋಷ್ ರವರು ಉಪಸ್ಥಿತರಿದ್ದರು.ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಡಾ.ಸುಮತಿ ಪಿ ಸ್ವಾಗತಿಸಿ, ಪ್ರೌಢಶಾಲಾ ಶಿಕ್ಷಕಿ ವಿಮಲಾ ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಉಪನ್ಯಾಸಕರು, ಅಧ್ಯಾಪಕರು ಹಾಗೂ ಕಾಲೇಜು ವಿಭಾಗ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





