ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 3 ಲಕ್ಷ ಮೊತ್ತದ ಡಿ.ಡಿ ಹಸ್ತಾಂತರ

ಸಾಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೆಂದಬೆಟ್ಟು ದೇವಸ್ಥಾನದ ಜಿರ್ಣೋದ್ಧಾರ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 3 ಲಕ್ಷ ಮೊತ್ತದ ಡಿ ಡಿ ಯನ್ನು ಕಾರ್ಕಳ ತಾಲೂಕಿನ ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಿರಿಂಜ ಇವರು ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀರಾಮ್ ಭಟ್ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಾಣೂರು ಗ್ರಾಮ
ಪಂಚಾಯತ್ ಅಧ್ಯಕ್ಷರಾದ ಯುವರಾಜ್ ಜೈನ್ ಹಾಗೂ ಕಾರ್ಕಳ ತಾಲೂಕು ಜನ ಜಾಗೃತಿ ನಿಕಟ ಪೂರ್ವ ಅಧ್ಯಕ್ಷರಾದ ಕಮಲಾಕ್ಷ ನಾಯಕ್, ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಕರುಣಾಕರ ಎಸ್ ಕೋಟ್ಯಾನ್ ತಾಲೂಕು ಪಂಚಾಯತಿಯ ಮಾಜಿ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಗ್ರಾಮ ಪಂಚಾಯತಿಯ ನಿಕಟಪೂರ್ವ ಸದಸ್ಯರಾದ ಭಾಸ್ಕರ್ ಭಟ್,ಒಕ್ಕೂಟದ ಅಧ್ಯಕ್ಷರು, ಪಧಾಧಿಕಾರಿಗಳು ವಲಯದ ಮೇಲ್ವಿಚಾರಕರಾದ ಸುಶೀಲ, ಸೇವಾಪ್ರತಿನಿಧಿಗಳಾದ ಶೋಭಾ ರಾವ್, ಅರುಣಿ, ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಪ್ರಮುಖರಾದ ವಿಶ್ವನಾಥ್ ಶೆಟ್ಟಿ, ಸದಾಶಿವ ಶೆಟ್ಟಿ, ಉದಯ ಅಂಚನ್, ರವಿ ಪೂಜಾರಿ, ಸಾಧು ನಾಯ್ಕ್, ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.