
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ತಿಪಂಜರ ಶೋಧ ಕಾರ್ಯ ತೀವ್ರಗೊಂಡಿದ್ದು ಬೆಳಗೆ 11 ಗಂಟೆಯಿಂದ ಸಾಕ್ಷಿ ದೂರುದಾರ ತೋರಿಸಿದ ಎರಡನೇ ಜಾಗದಲ್ಲಿ ಶೋಧ ಕಾರ್ಯ ನಡೆದಿದೆ.
ಮಧ್ಯಾನ 12:30 ವರೆಗೂ ನೇತ್ರಾವತಿ ನದಿ ಪಕ್ಕದ ದಟ್ಟ ಅರಣ್ಯ ಪ್ರದೇಶದಲ್ಲಿದ್ದ ಎರಡು ಮತ್ತು ಮೂರನೇ ಜಾಗದಲ್ಲಿ ಪಂಚಾಯತ್ ನ 20 ಮಂದಿ ಕಾರ್ಮಿಕರು ಉತ್ಪನ್ನನ ಕಾರ್ಯ ನಡೆಸಿದ್ದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ಈ ಹಿನ್ನೆಲೆ ಎಸ್ಐಟಿ ತಂಡವು ದೂರುದಾರನ ಜೊತೆ ನೆಕ್ಸ್ಟ್ ಸ್ಪಾಟ್ ಗೆ ಹೊರಟಿದ್ದು ಸದ್ಯ 4ನೇ ಜಾಗದಲ್ಲಿ ಉತ್ಪನ್ನ ಮಾಡಲು ಮುಂದಾಗಿದೆ. ಸಂಜೆ ವೇಳೆ ಎಸ್ಐಟಿ ಮುಖ್ಯಸ್ಥ ಮೊಹಂತಿ ಭೇಟಿ ನೀಡಲಿದ್ದು 11 ಮತ್ತು 12ನೇ ಸ್ಪಾಟ್ಗಳಲ್ಲಿ ಉತ್ಖನನ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.