
ಸವಿಗಾನ ಮೆಲೋಡೀಸ್ ಕಾರ್ಕಳ ಇವರಿಂದ ಆಯೋಜಿಸಲಾದ ಗಾಯನ ಸ್ಪರ್ಧೆಯನ್ನು ಶ್ರೀ.ಸದಾನಂದ ಶಾಂತಿ, ಪ್ರಧಾನ ಅರ್ಚಕರು ಶ್ರೀ ಕ್ರಷ್ಣ ಕ್ಷೇತ್ರ ಆನೆಕೆರೆ ಕಾರ್ಕಳ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಬಾಲಾಜಿ, ಬೈಲಡ್ಕ ಕುಂಟಲ್ಫಾಡಿಯ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ, ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನ, ಪತ್ತೊಂಜಿಕಟ್ಟೆ ಕಾರ್ಕಳದ ಆಡಳಿತ ಮೊಕ್ತೇಸರ ರಾದ ದಿವಾಕರ್ ಶೆಟ್ಟಿ, ಖ್ಯಾತ ನ್ಯಾಯವಾದಿ ಶ್ರೀಮತಿ.ಸವಿತ ಹೆಗ್ಡೆ ಯವರು ಮುಖ್ಯ ಅತಿಥಿಗಳಾಗಿದ್ದರು. ಶಿಕ್ಷಕರಾದ ರವೀಂದ್ರ ಹೆಗ್ಡೆ ಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸವಿಗಾನ ಮೆಲೋಡೀಸ್ ನ ಸಂಚಾಲಕರಾದ ಶ್ರೀಮತಿ ಸಂಧ್ಯಾ.ಎಸ್.ಶೆಟ್ಟಿಯವರು ಸ್ವಾಗತಿಸಿದರು. ಸ್ಥಾಪಕರಾದ ಪ್ರಕಾಶ್ ಕೆ, ಶ್ರೀಮತಿ.ಲತಾಪ್ರಕಾಶ್,.ಸದಾಶಿವ ಶೆಟ್ಟಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕುಮಾರಿ ಶ್ರುತಿ ಶಿಂಧೆಯವರ ಪ್ರಾರ್ಥನೆ ಯೊಂದಿಗೆ ಸಂತೋಷ್ ಕುಮಾರ್ ಮೂಡುಬಿದಿರೆ ಕಾರ್ಯಕ್ರಮ ನಿರ್ವಹಿಸಿದರು.
.