2024-26 ನೇ, ನೂತನ ಅಧ್ಯಕ್ಷರಾಗಿ ಸದಾನಂದ ಕೋಟ್ಯಾನ್, ಉಪಾಧ್ಯಕ್ಷರಾಗಿ ಸುರೇಶ್ ನಾಯ್ಕ್

ಸರ್ವೋದಯ ಯುವಕ ಮಂಡಲ ಹಾಗೂ ಸರ್ವೋದಯ ಮಹಿಳಾ ಮಂಡಲ ಸಂಘಟನೆಗಳ ವಾರ್ಷಿಕ ಮಹಾಸಭೆಯು ದಿನಾಂಕ 21-07-2024 ರಂದು ಕಡಾರಿಯ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದಲ್ಲಿ ನಡೆಯಿತು.
ಯುವಕಮಂಡಲದ ಅಧ್ಯಕ್ಷರಾದ ಶ್ರೀ ಅಶೋಕ್ ನಾಯ್ಕ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಲದ ಕಾರ್ಯದರ್ಶಿ ಶ್ರೀಮತಿ ಶುಭಾ ಜಗದೀಶ್ ಮತ್ತು ಯುವಕ ಮಂಡಲದ ಕಾರ್ಯದರ್ಶಿ ಶ್ರೀ ಸುಜೀತ್ ಅಂಚನ್ ವಾರ್ಷಿಕ ವರದಿ ವಾಚಿಸಿದರು. ಧಾರ್ಮಿಕ ಕಾರ್ಯದರ್ಶಿ ವಿನೋದ್ ನಾಯಕ್ ವಾರ್ಷಿಕ ಲೆಕ್ಕ ಪತ್ರದ ವಿವರಗಳನ್ನು ಮಂಡಿಸಿದರು.
ಕಳೆದ 2 ವರ್ಷ ಯುವಕ ಮಂಡಲವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ ಅಶೋಕ್ ನಾಯ್ಕ್ ರವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಹಾಗೂ ‘ಕರಾವಳಿ ಭಜನಾ ಸಂಸ್ಕಾರ ವೇದಿಕೆ ಮಂಗಳೂರು’ ಇದರ ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಗುರು ಪ್ರಸಾದ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು.
2024-2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ನಡೆದು ಶ್ರೀ ಸದಾನಂದ ಕೋಟ್ಯಾನ್ ರವರು ನೂತನ ಅಧ್ಯಕ್ಷರಾಗಿ ಮತ್ತು ಶ್ರೀ ಗುರುಪ್ರಸಾದ್ ಶೆಟ್ಟಿ ಯವರು ಕಾರ್ಯದರ್ಶಿಯಾಗಿ ನೇಮಕಗೊಂಡರು.
ಗೌರವಾಧ್ಯಕ್ಷರು – ಅಶೋಕ್ ನಾಯ್ಕ್
ಉಪಾಧ್ಯಕ್ಷರು – ಸುರೇಶ್ ನಾಯ್ಕ್
ಕೋಶಾಧಿಕಾರಿ – ಶಂಕರ್ ಕುಮಾರ್
ಜತೆ ಕಾರ್ಯದರ್ಶಿ – ಆದಿತ್ಯ ಅಂಚನ್
ಧಾರ್ಮಿಕ ಕಾರ್ಯದರ್ಶಿ – ವಿನೋದ್ ನಾಯ್ಕ್, ಮನೀಷ್ ಅಂಚನ್
ಸಾಂಸ್ಕೃತಿಕ ಕಾರ್ಯದರ್ಶಿ – ಗುರುಪ್ರಸಾದ್ ಪೂಜಾರಿ ಮತ್ತು ಅಭಿಷೇಕ್ ನಾಯಕ್
ಕ್ರೀಡಾ ಕಾರ್ಯದರ್ಶಿ – ಕಿರಣ್ ಭಂಡಾರಿ, ಕಿರಣ್ ಪೂಜಾರಿ
ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡರು.
ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಮಹಿಳಾ ಮಂಡಳಿಯ ಹಿಂದಿನ ಸಮಿತಿಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ನಿರ್ಧರಿಸಲಾಯಿತು.
ಗೌರವಾಧ್ಯಕ್ಷರು – ಮಾಲತಿ ನಾಯ್ಕ್
ಅಧ್ಯಕ್ಷರು – ಸರಸ್ವತಿ ಹೆಗ್ಡೆ
ಉಪಾಧ್ಯಕ್ಷರು – ಉಷಾ ನಾಯ್ಕ್
ಕಾರ್ಯದರ್ಶಿ – ಶುಭಾ ಪೂಜಾರಿ
ಜತೆ ಕಾರ್ಯದರ್ಶಿ – ಸುನೀತಾ ಪೂಜಾರಿ
ಕೋಶಾಧಿಕಾರಿ – ಶಾಲಿನಿ ಪೂಜಾರಿ
ಧಾರ್ಮಿಕ ಕಾರ್ಯದರ್ಶಿ – ವಿಜಯಾ ಹೆಗ್ಡೆ, ಸಂತೋಷಿ ಭಂಢಾರಿ
ಸಾಂಸ್ಕೃತಿಕ ಕಾರ್ಯದರ್ಶಿ – ನಂದನ ದೇವಾಡಿಗ, ಸರ್ವಾಣಿ ಪೂಜಾರಿ
ತಮ್ಮ ಸ್ಥಾನದಲ್ಲೇ ಮುಂದುವರಿದರು.
ವೇದಿಕೆಯಲ್ಲಿ ಮಹಿಳಾ ಮಂಡಲದ ಅಧ್ಯಕ್ಷರಾದ ಸರಸ್ವತಿ ಹೆಗ್ಡೆ,ಗೌರವಾಧ್ಯಕ್ಷರುಗಳಾದ ಸುರೇಶ್ ನಾಯ್ಕ್ ಮತ್ತು ಮಾಲತಿ ನಾಯ್ಕ್ ರವರು ಉಪಸ್ಥಿತರಿದ್ದರು. ಗುರುಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಲಿನಿ ಪೂಜಾರಿ ಪ್ರಾರ್ಥನೆ ನೆರವೇರಿಸಿದರು. ನಂದನಾ ದೇವಾಡಿಗ ಸ್ವಾಗತ ಕೋರಿದರು ಹಾಗೂ ವಿಜಯಾ ಬಾಲಕೃಷ್ಣ ಹೆಗ್ಡೆಯವರು ಧನ್ಯವಾದ ಸಲ್ಲಿಸಿದರು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಾಗೊಳಿಸಲಾಯಿತು.
ಸಭೆಯಲ್ಲಿ ಯುವಕಮಂಡಲದ ಮಾರ್ಗದರ್ಶಕರಾದ ಶ್ರೀ ಸೀತರಾಮ್ ಶೆಟ್ಟಿ, ವಸಂತ ಶೇರಿಗಾರ್ , ಚಂದ್ರಶೇಖರ್ ಶೆಟ್ಟಿ,ಯುವಕಮಂಡಲ ಮತ್ತು ಮಹಿಳಾ ಮಂಡಲಗಳ ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.








